ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಸ್ವರ್ಣದಷ್ಟೇ ಮೌಲ್ಯದ ಆಯುರ್ವೇದಿಕ್ ಗುಣವುಳ್ಳ ಸಸ್ಯ ದತ್ತೂರಿಯ ಬಗ್ಗೆ ನಿಮಗೆಷ್ಟು ಗೊತ್ತು?:-

admin by admin
September 13, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಸ್ವರ್ಣದಷ್ಟೇ ಮೌಲ್ಯದ ಆಯುರ್ವೇದಿಕ್ ಗುಣವುಳ್ಳ ಸಸ್ಯ ದತ್ತೂರಿಯ ಬಗ್ಗೆ ನಿಮಗೆಷ್ಟು ಗೊತ್ತು?:-

ಬಂಗಾರಕ್ಕಿಂತ ಶ್ರೇಷ್ಠವಾದ ದತ್ತೂರಿ ಗಿಡವು ಭಾರತದ ಎಲ್ಲಾ ಭಾಗಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಈ ವನಸ್ಪತಿಯ ಪರಿಚಯವು ಚರಕ, ಸುಶ್ರುತ ಸಂಹಿತೆಗಳಲ್ಲಿ ಕಾಣಬಹುದು. ಹೊಳೆಬದಿಗಳಲ್ಲಿ ಕೊಳಕು ಪ್ರದೇಶಗಳಲ್ಲಿ ದತ್ತೂರಿ ಗಿಡವು ಬೆಳೆಯುತ್ತದೆ. ಅಸ್ತಮಾ, ನಾಯಿಕೆಮ್ಮು, ಸೆಳೆತ ರೋಗಗಳಿಗೆ ದತ್ತೂರಿ ಒಳ್ಳೆಯ ಮದ್ದು ಎಂದು ಹಲವು ವೈದ್ಯರು ಒಪ್ಪಿಕೊಂಡಿದ್ದಾರೆ. ಮನಸ್ಸನ್ನು ವಿಕೃತಗೊಳಿಸುವ ಶಕ್ತಿ ದತ್ತೂರಿ ಗಿಡದ ಬೀಜದಲ್ಲಿರುವುದರಿಂದ ವಶೀಕರಣದಂತಹ ಕೆಲಸಕ್ಕೆ ಇದರ ಬೀಜವನ್ನು ಹಿಂದಿನ ಕಾಲದಿಂದಲೂ ಬಳಸುತ್ತಿದ್ದರು.

Related posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

May 6, 2026
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

May 6, 2026

ಗಾಯ, ನೋವು, ತುರಿಕೆ, ತ್ವಚೆಯ ರೋಗಗಳನ್ನು ನಿವಾರಿಸಿ ರ್ಮಕ್ಕೆ ಕಾಂತಿ ನೀಡುವ ದತ್ತೂರಿಯು ಆಯುರ್ವೇದದ ಪ್ರಮುಖದ್ರವ್ಯಗಳಲ್ಲೊಂದು.
ಇದಕ್ಕೆ ಕನ್ನಡದಲ್ಲಿ ಉಮ್ಮತ್ತಿ ಅಥವಾ ದತ್ತೂರಿ ಎಂದೂ, ತುಳುವಿನಲ್ಲಿ ಉಂಬೆದ ದೈ, ಸಂಸ್ಕೃತ ಮತ್ತು ಹಿಂದಿಯಲ್ಲಿ ದತ್ತೂರ ಎಂದೂ ಇಂಗ್ಲೀಷ್ ನಲ್ಲಿ ಥಾರ್ನ್ ಆಪಲ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ, ಕನಕ, ಮದನ, ಶಿವಪ್ರಿಯಾ, ಮಾತುಲ ಪುತ್ರಕ, ಉನ್ಮತ್ತ, ಕಾಂಚನಾ, ಹೇಮಾ, ಮಹಾಮೋಹಿ ಇತ್ಯಾದಿ.
ಈ ಗಿಡವು 6 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ತ್ರಿಕೋನಾಕಾರದ ಎಲೆಗಳನ್ನು ಹೊಂದಿದ್ದು, 5 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ಬಿಳಿ ನೇರಳೆ ಬಣ್ಣದ ಹೂಗಳನ್ನು ಹೊಂದಿರುತ್ತದೆ. ಕಾಯಿಗಳು ಚೆಂಡಿನಾಕಾರದಲ್ಲಿದ್ದು ಮುಳ್ಳಿನಿಂದ ಕೂಡಿರುತ್ತದೆ.

ಇದರಲ್ಲಿ ಎರಡು ಪ್ರಮುಖ ಪ್ರಬೇಧಗಳಿವೆ. ಅವು ಶ್ವೇತ ದತ್ತೂರ (ದತೂರ ಸ್ಟ್ರಾಮೋನಿಯಂ), ಬಿಳಿ ದತ್ತೂರ (ದತೂರ ಮೆಟಲ್). ಆದರೆ ಪುರಾತನ ವೈದ್ಯಶಾಸ್ತ್ರಜ್ಞರು ದತ್ತೂರಿ ಗಿಡದಲ್ಲಿ ಶ್ವೇತ ದತ್ತೂರ, ನೀಲದತ್ತೂರ, ಪೀತ ದತ್ತೂರ, ರಕ್ತದತ್ತೂರ, ಕೃಷ್ಣದತ್ತೂರ ಎಂಬುದಾಗಿ ಐದು ಪ್ರಬೇಧಗಳನ್ನು ಗುರುತಿಸಿದ್ದಾರೆ. ದತ್ತೂರಿ ಗಿಡದ ಬೇರು, ಕಾಯಿ, ಬೀಜ, ಹೂವು, ಎಲೆ ಔಷಧೀಯ ಉಪಯೋಗವನ್ನು ಹೊಂದಿವೆ. ದತ್ತೂರದಿಂದ ತಯಾರಿಸಿದ ತೈಲವನ್ನು ನೋವಿನ ಸ್ಥಳಕ್ಕೆ ಹಚ್ಚಿ ಮೃದುವಾಗಿ ಉಜ್ಜಿ, ಶಾಖ ಕೊಡುವುದರಿಂದ ಸಂಧಿವಾತ, ಉಳುಕಿನ ನೋವು ಮತ್ತು ವಾತವ್ಯಾಧಿಗಳಲ್ಲಿ ಕಾಣುವ ಸಂಧಿ ಶೂಲಗಳು ಕಡಿಮೆಯಾಗುವುವು.

ಮಂಗನ ಬಾವು ರೋಗದಲ್ಲಿ ಸ್ವಲ್ಪ ಜ್ವರವಿದ್ದು ಕಿವಿಯ ಹತ್ತಿರದ ದವಡೆಯ ಭಾಗವು ಬಾತುಕೊಳ್ಳುತ್ತದೆ. ಅದಕ್ಕೆ ಒಂದು ದತ್ತೂರದ ಎಲೆ, ಸ್ವಲ್ಪ ಸುಣ್ಣ, ಸ್ವಲ್ಪ

https://youtu.be/_st-YDZlTCE

ಬೆಲ್ಲವನ್ನು ಒಟ್ಟಾಗಿ ಅರೆದು ಲೇಪಿಸುವುದರಿಂದ ಮಂಗನ ಬಾವು ರೋಗದಿಂದ ಗುಣ ಸಿಗುತ್ತದೆ. ಉಮ್ಮತ್ತಿಯ ಬೀಜದೆಣ್ಣೆಯನ್ನು ನಿಂಬೆರಸದಲ್ಲಿ ಬೆರೆಸಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಿದರೆ ವಿಷ ಏರುವುದನ್ನು ತಡೆಯಬಹುದು. ಉಮ್ಮತ್ತಿಯ ಎಲೆಗಳನ್ನು ಸುಟ್ಟು ಬರುವ ಹೊಗೆಯನ್ನು ಸೇವಿಸಿದರೆ ಕೆಮ್ಮು, ದಮ್ಮಿನಂತಹ ರೋಗಗಳು ವಾಸಿಯಾಗುವುವು. ದತ್ತೂರಿಯ ಎಲೆಯ ರಸವನ್ನು ಕುರು, ಹುಣ್ಣು, ಗಾಯಗಳ ಮೇಲೆ ಹಚ್ಚಿದರೆ ಗುಣವಾಗುತ್ತದೆ. ದತ್ತೂರ ಎಲೆಯ ರಸಕ್ಕೆ ಸಕ್ಕರೆ ಮತ್ತು ಜೇನು ಬೆರೆಸಿ 125ಮಿ.ಲೀ ಪ್ರಮಾಣದಷ್ಟು ಸೇವಿಸುವುದರಿಂದ ಎಲ್ಲಾ ವಿಧದ ಜ್ವರ ನಿವಾರಣೆಯಾಗುತ್ತದೆ.

ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು

Tags: # Vanaspati#Charaka#Dattatarii#Sushruta SamhitasAyurvedaindiakarnataka
ShareTweetSendShare
Join us on:

Related Posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

by Shwetha
May 6, 2026
0

ದೇಶದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಪ್ರಸ್ತುತ, ಬಿಜೆಪಿ ದೇಶಾದ್ಯಂತ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ...

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

by Shwetha
May 6, 2026
0

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

by Shwetha
May 6, 2026
0

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹಚ್ಚಿದೆ. ಮರುಎಣಿಕೆಯಲ್ಲಿ ಜೀವರಾಜ್ ಅಕ್ರಮ ಎಸಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ...

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

by Shwetha
May 6, 2026
0

ತಮಿಳುನಾಡಿನ ಜನಪ್ರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಘೋಷಿಸಿರುವ ಜನಪ್ರಿಯ ಕಲ್ಯಾಣ ಯೋಜನೆಗಳು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿರುವುದು ನಿಜ....

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram