ಜನ್ಮ ಕೊಟ್ಟ ತಂದೆಗೆ ಮದ್ಯ ಕುಡಿಸಿ ಬೆಂಕಿ ಇಟ್ಟ ಮಗಳು..!
ಪಶ್ಚಿಮಬಂಗಾಳ : ಮಹಿಳೆಯೊಬ್ಬಳು ತನ್ನ ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಶ್ಚಿಮಬಂಗಾಳದ ಕೊಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ. 22 ವರ್ಷದ ಮಹಿಳೆ ತನ್ನ (56) ತಂದೆಯನ್ನ ಊಟಕ್ಕೆ ರೆಸ್ಟೋರೆಂಟ್ ಗೆ ಕರೆದೊಯ್ದು ಚನ್ನಾಗಿ ಕುಡಿಸಿದ್ದಾಳೆ. ಬಳಿಕ ಹೂಗ್ಲಿ ನದಿಯ ದಡಕ್ಕೆ ಇಬ್ಬರೂ ತೆರಳಿದ್ದಾರೆ. ಅಲ್ಲಿ ತಂದೆ ನಿದ್ರೆಗೆ ಜಾರುತ್ತಿದ್ದಂತೆ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆಎರೆಯಾಗಿದ್ದು, ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.
ಘಟನೆ ಕುರಿತಂತೆ ಮಹಿಳೆಯನ್ನ ವಿಚಾರಣೆ ನಡೆಸಿದ ವೇಳೆ , ಕೊಲೆ ಮಾಡಿದಕ್ಕೆ ಕಾರಣ ಬಿಚ್ಚಿಟ್ಟಿದ್ದಾಳೆ. ನನ್ನ ತಾಯಿ ಚಿಕ್ಕ ವಯಸ್ಸಲ್ಲೇ ತೀರಿಕೊಂಡಿದ್ದರು. ಆಗಿನಿಂದಲೂ ನನ್ನ ತಂದೆ ನನಗೆ ತುಂಬಾ ಹಿಂಸೆ ನೀಡುತ್ತಿದ್ದರು. ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು. ಮಾನಸಿಕವಾಗಿಯೂ ಚಿತ್ರಹಿಂಸೆ ನೀಡುತ್ತಿದ್ದರು. ಆದ್ರೆ ನಾನು ಮದುವೆಯಾದ ನಂತರ ತಂದೆ ಹಿಂಸೆ ನೀಡುವುದನ್ನ ನಿಲ್ಲಿಸಿದ್ದರು. ಆದ್ರೆ ನನ್ನ ಮದುವೆ ಮುರಿದು ಬಿದ್ದ ನಂತರ ಮತ್ತೆ ಅಪ್ಪನ ಮನೆಗೆ ಬಂದಮೇಲೆ ಮತ್ತೆ ನನಗೆ ಹಿಂಸೆ ನೀಡಲು ಆರಂಭಿಸಿದರು. ಹೀಗಾಗಿ ಬೇಸತ್ತು ಈ ರೀತಿ ಮಾಡಿದೆ ಎಂದು ತಿಳಿಸಿದ್ದಾಳೆ.
ಕಸದ ತೊಟ್ಟಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!
ವಾಟ್ಸಾಪ್ ನಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ ಸಂದೇಶ : ‘ಕೈ’ ನಾಯಕನ ಬಂಧನ..!







