ಕಸದ ತೊಟ್ಟಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!
ಮಧ್ಯಪ್ರದೇಶ: 8 ವರ್ಷದ ಬಾಲಕಿಯನ್ನ ಕಾಮುಕನೋರ್ವ ಕಸದ ತೊಟ್ಟಿಗೆ ಎಳೆದು ಅತ್ಯಾಚಾರವೆಸಗಿ ಬಳಿಕ ಆಕೆಯ ಬಾಯಿಮುಚ್ಚಿಸಲು 5 ರೂಪಾಯಿ ಕೊಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ವ್ಯಕ್ತಿ ಓರ್ವ ಬಂದು ಸಮೀಪದ ಅಂಗಡಿಯಿಂದ ತಂಬಾಕು ತರುವಂತೆ ಕಳುಹಿಸಿದ್ದಾನೆ. ಬಳಿಕ ಅದನ್ನ ಕಸದ ತೊಟ್ಟಿಯಲ್ಲಿದ್ದ ವ್ಯಕ್ತಿಗೆ ಕೊಡುವಂತೆ ತಿಳಿಸಿದ್ದಾನೆ.
ಬಾಲಕಿ ಅದನ್ನ ಕೊಡಲು ಹೋದಾಗ ಆಕೆಯನ್ನ ಎಳೆದುಕೊಂಡು ಅತ್ಯಾಚಾರವೆಸಗಿದ್ದಾನೆ. ಬಳಿಕ ಈ ವಿಚಾರ ಯಾರಿಗೂ ತಿಳಿಸದಂತೆ ಹೇಳಿ 5 ರೂಪಾಯಿ ಕೊಟ್ಟು ಕಳುಹಿಸಿದ್ದಾನೆ ಎನ್ನಲಾಗಿದೆ. ಆದ್ರೆ ಬಾಲಕಿ ಮನೆಗೆ ಬಂದ ಈ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಈ ಸಂಬಂಧ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ. ಬಳಿಕ ಅನುಮಾನಾಸ್ಪದ ವ್ಯಕ್ತಿಗಳ ಫೋಟೋ ನೋಡಿ ಬಾಲಕಿಯು ಆರೋಪಿಯನ್ನ ಗುರುತಿಸಿದ್ದು, ಪೊಲೀಸರು ಆತನನ್ನ ಬಂಧಿಸಿದ್ದಾರೆ.
ವಾಟ್ಸಾಪ್ ನಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ ಸಂದೇಶ : ‘ಕೈ’ ನಾಯಕನ ಬಂಧನ..!