ಅಮೆರಿಕ: ತಾಯಿಯ ಜೋಕ್ ಕೇಳುತ್ತಿದ್ದಂತೆ 5 ವರ್ಷದಿಂದ ಕೋಮಾದಲ್ಲಿದ್ದ ಮಗಳು ಎಚ್ಚರವಾಗಿರುವ ಪವಾಡವೊಂದು ನಡೆದಿದೆ.
ಮಿಚಿಗನ್ನ ಜೆನ್ನಿಫರ್ ಫ್ಲೆವೆಲೆನ್ ಎಂಬ ಯುವತಿ ಅಪಘಾತದಿಂದಾಗಿ ಕಳೆದ 5 ವರ್ಷಗಳಿಂದ ಕೋಮಾದಲ್ಲಿದ್ದರು. ಆದರೆ, ಮಗಳನ್ನು ಕೋಮಾದಿಂದ ಹೊರ ತರಲು ತಾಯಿಯು ಪ್ರತಿ ದಿನ ಜೋಕ್ ಹೇಳುತ್ತಿದ್ದಳು. ಸದ್ಯ ಈಗ ಮಗಳು ತಾಯಿಯ ಜೋಕ್ ಕೇಳುತ್ತಿದ್ದಂತೆ ಎಚ್ಚರವಾಗಿದ್ದಾಳೆ.
ಯುವತಿ ಕೋಮಾಗೆ ಜಾರುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಹೊರ ತರಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಪ್ರಯತ್ನ ವಿಫಲವಾಗಿತ್ತು. ಹೀಗಾಗಿ ಪ್ರತಿ ದಿನ ಜೋಕ್ ಹೇಳುವಂತೆ ಸಲಹೆ ನೀಡಿದ್ದರು. ಹೀಗಾಗಿ ತಾಯಿಯು ಪ್ರತಿ ದಿನ ಜೋಕ್ ಹೇಳುತ್ತಿದ್ದಳು. ಸದ್ಯ ಆ ಪ್ರಯತ್ನ ಫಲಿಸಿದ್ದು, ಮಗಳು ಎಚ್ಚರಗೊಂಡಿದ್ದಾಳೆ.
ಮಗಳು ಇದ್ದಕ್ಕಿದ್ದಂತೆ ನಗಾಡುತ್ತ ಎದ್ದಿದ್ದು, ತಾಯಿ ಕೂಡ ಭಯ ಬೀಳುವಂತೆ ಮಾಡಿತ್ತು. 2017ರಲ್ಲಿ ಭೀಕರ ಕಾರು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜೆನ್ನಿಫರ್ ಕೋಮಾಗೆ ಜಾರಿದ್ದರು. ಆಗ ಅವರ ವಯಸ್ಸು 36. ಸದ್ಯ 41 ನೇ ವಯಸ್ಸಿಗೆ ಇದ್ದಕ್ಕಿದ್ದಂತೆ ಕೋಮಾದಿಂದ ಹೊರ ಬಂದಿದ್ದಾರೆ. ಶೇ. 1 ರಿಂದ 2ರಷ್ಟು ರೋಗಿಗಳಲ್ಲಿ ಮಾತ್ರ ಈ ರೀತಿ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.