DAVANAGERE | ಪತ್ನಿ ಉಳಿಸಿಲು ಹೋದ ಪತಿಯೂ ಸಾವು!
ಕರೆಂಟ್ ಶಾಕ್ ಹೊಡೆದು ದಂಪತಿ ಸಾವು
ದಾವಣಗೆರೆಯ ಬಾವಿಯಾಳಿವಿನಲ್ಲಿ ಘಟನೆ
ವೀಣಾ (28), ರವಿಶಂಕರ್ (40) ಮೃತರು
ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲು
ದಾವಣಗೆರೆ : ಪತ್ನಿಯನ್ನು ಉಳಿಸಲು ಹೋಗಿ ಪತಿಯೂ ಪ್ರಾಣಬಿಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
28 ವರ್ಷದ ವೀಣಾ, 40 ವರ್ಷದ ರವಿಶಂಕರ್ ಮೃತರಾಗಿದ್ದಾರೆ.
ಇವರು ಕರೆಂಟ್ ಶಾಕ್ ಹೊಡೆದು ಕೊನೆಯುಸಿರೆಳೆದಿದ್ದಾರೆ.

ಬಟ್ಟೆ ಬಿಸಲಿಗೆ ಹಾಕುವಾಗ ವೀಣಾ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ.
ಈ ವೇಳೆ ಆಕೆಯನ್ನು ಉಳಿಸಲು ಹೋದ ರವಿಶಂಕರ್ ಗೂ ಕೂಡ ವಿದ್ಯುತ್ ಸ್ಪರ್ಶಿಸಿದೆ.
ಇದರಿಂದ ಸ್ಥಳದಲ್ಲಿಯೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ಮಾಯಕೊಂಡ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.