ಗ್ರಾಮಕ್ಕೆ ಬಂದ ಸರ್ಕಾರಿ ಬಸ್ , ವಿದ್ಯಾರ್ಥಿಗಳು ಫುಲ್ ಖುಷ್..!
ದಾವಣಗೆರೆ : ದಾವಣಗೆರೆಯ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಬಸ್ ವ್ಯವಸ್ಥೆ ಸರಿಯಾಗಿ ಇಲ್ಲದೆ ವಿದ್ಯಾರ್ಥಿಗಳು ಪ್ರತಿನಿತ್ಯ ಪರದಾಡುವಂತಾಗಿತ್ತು. ಹೀಗಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು.
ಇದೀಗ ಕೊನೆಗೂ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಇನ್ನೂ ಗ್ರಾಮಕ್ಕೆ KSRTC ಬಸ್ ಬರುತ್ತಿದ್ದಂತೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಹರ್ಷವ್ಯಕ್ತಪಡಿಸಿದ್ದಾರೆ.
ಬಸವನಕೋಟೆ ಸುತ್ತಮುತ್ತಲಿನ ಗ್ರಾಮದಿಂದ ಕೊಟ್ಟೂರಿಗೆ ಪ್ರತಿನಿತ್ಯ 70 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸಂಚಾರ ಮಾಡಬೇಕಿತ್ತು. ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಕೊನೆಗೂ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಬಸ್ ವ್ಯವಸ್ಥೆ ಮಾಡಿದ್ದಾರೆ.
ಕಂಬಳ ಆಯೋಜಿಸಲು ಉಡುಪಿ, ದ.ಕ. ಜಿಲ್ಲೆಗಳಿಗೆ ತಲಾ 50 ಲಕ್ಷ ರೂ ಅನುದಾನ
ಎಣ್ಣೆ ಕುಡಿಯೋಕೆ ಹಣ ಕೊಡದ ತಾಯಿಯನ್ನ ಕೊಂದ ಮಗ
ಕೊರೊನಾ ತೊಲಗಿಲ್ಲ.. ಕಾದಿದೆ ಮಾರಿ ಹಬ್ಬ..!!
ಬೆಳಗಾವಿ : ಕೊರೊನಾ ಸೋಂಕು ತಪಾಸಣೆ ವೇಳೆ ವೈದ್ಯರು ಗ್ರಾಮಸ್ಥರ ನಡುವೆ ವಾಗ್ವಾದ..!
ಕೊಡಗಿನಲ್ಲಿ ನರಹಂತ ಹುಲಿ ಗುಂಡೇಟಿಗೆ ಬಲಿ..!