3 ವರ್ಷದ ನಂತರ ವಾರ್ನರ್ ಕಂಬ್ಯಾಕ್ ; ಮೂರನೇ ದ್ವಿ ಶತಕ ಸಿಡಿಸಿ ದಾಖಲೆ…
ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್- ಡೇ ಟೆಸ್ಟ್‌ನ ಎರಡನೇ ದಿನ ಆಸ್ಟ್ರೇಲಿಯಾದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ದ್ವಿಶತಕ ಗಳಿಸಿ ಸಂಭ್ರಮಿಸಿದ್ದಾರೆ. ತನ್ನ ವೃತ್ತಿ ಜೀವನದ ಸ್ಮರಣೀಯ ನೂರನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಇದು ಅವರ ಮೂರನೇ ದ್ವಿಶತಕ. ಆದರೇ 200 ರನ್ ಗಳಿಸಿ ಸಂಭ್ರಮಾಚರಣೆ ಮಾಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡು ಗಾಯದಿಂದ ನಿವೃತ್ತರಾಗಿದ್ದಾರೆ.
ದ್ವಿ ಶತಕಕ್ಕೂ ಮುನ್ನ ವಾರ್ನರ್ 1089 ದಿನಗಳ ನಂತರ ಶತಕ ಬಾರಿಸಿದ್ದಾರೆ. ಇದು ವಾರ್ನರ್ ಅವರ 25 ನೇ ಟೆಸ್ಟ್ ಶತಕವಾಗಿತ್ತು. ವಾರ್ನರ್ ತಮ್ಮ ಕೊನೆಯ ಶತಕವನ್ನು 3 ಜನವರಿ 2020 ರಂದು ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಸಿಡಿಸಿದ್ದರು. ವಾರ್ನರ್ ರೀತಿಯೇ ವಿರಾಟ್ ಕೊಹ್ಲಿ (113) 1020 ದಿನಗಳ ನಂತರ ಶತಕ ದಾಖಲಿಸಿದರು. ಏಷ್ಯಾಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಈ ಶತಕದ ಬರ ನೀಗಿಸಿಕೊಂಡಿದ್ದರು.
ವಾರ್ನರ್ ಇದಷ್ಟೆ ಅಲ್ಲದೇ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ 8000 ರನ್ ಗಳಿಸಿದ 8 ನೇ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಜೊತೆಗೆ ತವರು ನೆಲದಲ್ಲಿ 5000 ರನ್ ಗಳಿಸಿದ ಆಸ್ಟ್ರೇಲಿಯಾ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ.
ವಾರ್ನರ್ ಮೆಲ್ಬೋರ್ನ್ ನಲ್ಲಿ 100 ನೇ ಟೆಸ್ಟ್ ಪಂದ್ಯ ಆಡುತ್ತಿರು ಮೂರನೇ ಬ್ಯಾಟ್ಸಮನ್ ಆಗಿದ್ದಾರೆ. ಅವರಿಗಿಂತ ಮೊದಲು, ಬ್ರಿಯಾನ್ ಲಾರಾ ಮತ್ತು ಸೌರವ್ ಗಂಗೂಲಿ ಮೆಲ್ಬೋರ್ನ್‌ನಲ್ಲಿ ತಮ್ಮ 100 ನೇ ಟೆಸ್ಟ್ ಆಡಿದ್ದರು.
David Warner Double Century; South Africa Vs Australia Melbourne Tes