David Warner : 100 ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಬರೆದ ವಾರ್ನರ್..
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ವೃತ್ತಿ ಜೀಚನದಲ್ಲಿ ಐತಿಹಾಸಿದ ಮತ್ತು ಸ್ಮರಣೀರ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ (AUS vs SA) ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ 100 ಟೆಸ್ಟ್ ಪಂದ್ಯವನ್ನ ಆಡುತ್ತಿರುವ ವಾರ್ನರ್ ಅದ್ಭುತ ಶತಕ ಗಳಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಡೇವಿಡ್ ವಾರ್ನರ್ ಅವರ ಅದ್ಭುತ ಇನ್ನಿಂಗ್ಸ್ ಆಡಿ ಅನುಭವಿ ಆಟಗಾರ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು.
145 ಎಸೆತಗಳಲ್ಲಿ ಶತಕ ಗಳಿಸಿದ ಡೇವಿಡ್ ವಾರ್ನರ್ 100 ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 10 ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಪಂದ್ಯದಲ್ಲಿ 78 ರನ್ ಪೂರೈಸಿದ ನಂತರ ವಾರ್ನರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 8000 ರನ್ ಪೂರೈಸಿದರು. ಈ ಮೂಲಕ ಡೇವಿಡ್ ಟೆಸ್ಟ್ನಲ್ಲಿ ಎಂಟು ಸಾವಿರ ರನ್ಗಳ ಮೈಲುಗಲ್ಲು ತಲುಪಿದ ಆಸ್ಟ್ರೇಲಿಯಾದ ಎಂಟನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
David Warner: Warner scored a century in the 100th test match.