( Davos Summit 2022 ) ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕದಲ್ಲಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸಕ್ಸಸ್ ಕಂಡಿದೆ.. ಇದೇ ಮೊದಲ ಬಾರಿಗೆ 2 ಒಪ್ಪದಗಳಿಗೆ ಸಹಿ ಮಾಡಲಾಗಿದೆ.
ಈ ಶೃಂಗಸಭೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್ ನಿಂದ ಜಾಗತಿಕ ಆರ್ಥಿಕತೆಯು ಹಿಂಜರಿಕೆಯ ಸುಳಿಯಲ್ಲಿ ಸಿಲುಕಿರುವ ಅಪಾಯ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಈ ಬಾರಿಯ ಶೃಂಗಸಭೆ ಎಲ್ಲರ ಗಮನ ಸೆಳೆದಿತ್ತು.. ಭಾರತವು ನಿಜವಾಗಿಯೂ ಬೆಳೆಯುತ್ತಿರುವ ಆರ್ಥಿಕತೆ ಎಂಬುದು ಮನವರಿಕೆಯಾಯ್ತು..
ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ವೈಪರಿತ್ಯಗಳು ಈ ಬಾರಿಯ ಚರ್ಚೆಯ ಮುಖ್ಯ ಅಂಶಗಳಾಗಿದ್ದವು. ಕರ್ನಾಟಕವು ಈ ಬಾರಿ ದೊಡ್ಡ ಮಟ್ಟದ ಬಂಡವಾಳ ಆಕರ್ಷಿಸಿದೆ. ಹೂಡಿಕೆದಾರರ ಆಸಕ್ತಿ ಉತ್ತಮವಾಗಿದೆ.
ವಿಶ್ವದ ಹಲವು ಕಂಪನಿಗಳು ಕರ್ನಾಟಕದಲ್ಲಿ ಬಂಡವಾಳದ ಭರವಸೆ ನೀಡಿರೋದಾಗಿ ಸಿಎಂ ತಿಳಿಸಿದ್ಧಾರೆ…
ಈ ಬಾರಿ ಮೊದಲ ಬಾರಿಗೆ 2 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ರೆನ್ಯೂ ಪವರ್ ಕಂಪನಿ 50,000 ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದದ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇನ್ನೂ ಲುಲು ಗ್ರೂಪ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಇವೆರಡೂ ಒಪ್ಪಂದಗಳು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.
I am blessed to be born & educated in Karnataka. Blessed that I represent my state & lead it. We have a rich culture & heritage. God has endowed Karnataka with nature’s bounty. We are blessed with rich bio-diversity, having 10 Agro-climatic zones & 300 days of sunshine. #Davos22 pic.twitter.com/ThRp4aOCtq
— Basavaraj S Bommai (@BSBommai) May 25, 2022