DC vs RR Match | ರಾಜಸ್ಥಾನ್ ವಿರುದ್ಧ ಡೆಲ್ಲಿಗೆ ಜಯ
ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಅದ್ಭುತ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ಗಳ ಜಯ ಸಾಧಿಸಿದೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 160 ರನ್ಗಳಿಸಿತು.
ಈ ಸವಾಲು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 18.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ಗಳಿಸಿ ಗೆಲುವಿನ ನಗೆಬೀರಿತು.
ಈ ಗೆಲುವಿನೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ-ಆಫ್ ಪ್ರವೇಶಿಸುವ ಕನಸು ಜೀವಂತವಾಗಿ ಇರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಜೋಸ್ ಬಟ್ಲರ್ ಕೇವಲ 7 ರನ್ , ಯಶಸ್ವಿ ಜೈಸ್ವಾಲ್ 19 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಅಚ್ಚರಿ ರೀತಿಯಲ್ಲಿ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರವಿಚಂದ್ರನ್ ಅಶ್ವಿನ್, ದೇವದತ್ತ್ ಪಡಿಕಲ್ ಜೊತೆ ಸೇರಿಕೊಂಡು ಉತ್ತಮ ಇನ್ನಿಂಗ್ಸ್ ಕಟ್ಟಿದರು.
ರವಿಚಂದ್ರನ್ ಅಶ್ವಿನ್ 38 ಎಸೆತಗಳಲ್ಲಿ 50 ರನ್ ಗಳಿಸಿದ್ರೆ ದೇವದತ್ ಪಡಿಕಲ್ 30 ಎಸೆತಗಳಲ್ಲಿ 48 ರನ್ ಗಳಿಸಿದರು.
ಆದರೆ ನಂತರ ಬಂದ ನಾಯಕ ಸಂಜೂ ಸ್ಯಾಮ್ಸನ್(6), ರಿಯಾನ್ ಪರಾಗ್(9) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಅಂತಿಮವಾಗಿ ದುಸೇನ್(12*) ಮತ್ತು ಬೋಲ್ಟ್(3*) ತಂಡದ ಮೊತ್ತವನ್ನ 160ಕ್ಕೆ ಏರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಚೇತನ್ ಸಕಾರಿಯಾ(2/23), ಅನ್ರಿಕ್ ನೋಕಿಯಾ(2/39) ಹಾಗೂ ಮಿಚೆಲ್ ಮಾರ್ಷ್(2/25) ಉತ್ತಮ ಪ್ರದರ್ಶನ ನೀಡಿದರು.
ರಾಜಸ್ಥಾನ್ ರಾಯಲ್ಸ್ ನೀಡಿದ 161 ರನ್ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರಂಭದಲ್ಲೇ ಶ್ರೀಕರ್ ಭರತ್(0) ವಿಕೆಟ್ ಕಳೆದುಕೊಂಡಿತು.
ಆದರೆ ನಂತರ ಜೊತೆಯಾದ ಡೇವಿಡ್ ವಾರ್ನರ್ 52* ರನ್(41 ಬಾಲ್, 5 ಬೌಂಡರಿ, 1 ಸಿಕ್ಸ್) ಹಾಗೂ ಮಿಚೆಲ್ ಮಾರ್ಷ್ 89 ರನ್(62 ಬಾಲ್, 5 ಬೌಂಡರಿ, 7 ಸಿಕ್ಸ್) ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಜೋಡಿ 2ನೇ ವಿಕೆಟ್ಗೆ 143 ರನ್ಗಳ ಅದ್ಭುತ ಜೊತೆಯಾಟದಿಂದ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು.
ನಂತರ ಬಂದ ರಿಷಭ್ ಪಂತ್(13*) ತಂಡವನ್ನ ಗೆಲುವಿನ ದಡಸೇರಿದರು. ರಾಜಸ್ಥಾನ್ ಪರ ಬೋಲ್ಟ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು. dc-vs-rr-match-delhi capitals beat rajasthan royals