ಪರೀಕ್ಷಾ ಕೊಠಡಿ ಮೇಲ್ವಿಚಾರಕನನ್ನು ಅಮಾನತು ಮಾಡಿದ ಡಿಡಿಪಿಐ
ಕಲಬುರಗಿ: SSLC ಪರೀಕ್ಷೆಯಲ್ಲಿ ವಿದ್ಯಾರ್ಥನಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕೆ ಕೊಠಡಿ ಮೇಲ್ವಿಚಾರಕನ್ನು ಡಿಡಿಪಿಐ ಅಮಾನತು ಮಾಡಿರುವ ಘಟನೆ ಕಲಬುರಗಿಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 28 ರಂದು ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿನಿ ಆಗಮಿಸಿದ್ದಳು.
ಆದರೆ ಇದಕ್ಕೆ ಕೊಠಡಿ ಮೇಲ್ವಿಚಾರಕ ಹಯಾದ್ ಭಾಗವಾನ್ ಪ್ರಶ್ನೆ ಮಾಡದೆ ಅವಕಾಶ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಜೇವರ್ಗಿ ಶ್ರೀರಾಮಸೇನೆ ಅಧ್ಯಕ್ಷ ನಿಂಗನಗೌಡ ಡಿಡಿಪಿಐಗೆ ದೂರು ನೀಡಿದ್ದರು.
ಈ ಸಂಬಂಧ ಶಿಕ್ಷಕ ಹಯಾದ್ ಭಾಗವಾನ್ ಅನ್ನು ಅಮಾನತ್ತು ಮಾಡಿ ಕಲಬುರಗಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.








