IPL 2022 | ಡಿಕಾಕ್ – ರಾಹುಲ್ ವಿಧ್ವಂಸಕ ಆಟ.. ಹಲವು ದಾಖಲೆಗಳು ಧೂಳಿಪಟ
ಐಪಿಎಲ್ 2022 ಸೀಸನ್ ನ ಅಂತಿಮ ಹಂತದಲ್ಲಿ ಕ್ರಿಕೆಟ್ ಪ್ರೇಮಿಗಳು ಬಯಸುವ ನಿಜವಾದ ವಿನೋದ ದಕ್ಕಿದೆ.
ಮೇ 18 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟ್ಸ್ ಮನ್ ಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.
ಅದರಲ್ಲೂ ಲಕ್ನೋ ಆರಂಭಿಕರಾದ ಡಿಕಾಕ್ 70 ಎಸೆತಗಳಲ್ಲಿ ಔಟಾಗದೆ 140 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿ, 10 ಸಿಕ್ಸರ್ ಗಳಿವೆ.
ಮತ್ತೊಬ್ಬ ಕೆಎಲ್ ರಾಹುಲ್ 51 ಎಸೆತಗಳಲ್ಲಿ ಔಟಾಗದೆ 68 ರನ್ ಚಚ್ಚಿದರು.
ಆನಂತರ ಕೆಕೆಆರ್ ಬ್ಯಾಟ್ಸ್ ಮನ್ ಗಳು ಕೂಡ ಅತ್ಯುತ್ತಮವಾಗಿ ಹೋರಾಟ ನಡೆಸಿದರು. ಹೀಗಾಗಿ ಪಂದ್ಯ ಕೊನೆಯ ಕ್ಷಣದವರೆಗೂ ಸಾಗಿತು.
ಆದರೆ, ಕೆಕೆಆರ್ ಕೊನೆಯ ಎರಡು ಎಸೆತಗಳಿಗೆ ಎರಡು ವಿಕೆಟ್ ಕಳೆದುಕೊಂಡು 2 ರನ್ ಗಳ ಅಲ್ಪ ಅಂತರದಲ್ಲಿ ಪಂದ್ಯವನ್ನು ಕಳೆದುಕೊಂಡಿತು.
ಇದರೊಂದಿಗೆ ಕೆಕೆಆರ್ ತಂಡದ ಐಪಿಎಲ್ ಅಭಿಯಾನ ಸೋಲಿನೊಂದಿಗೆ ಕೊನೆಗೊಂಡಿದೆ.
ಆದಾಗ್ಯೂ, ಈ ಪಂದ್ಯದಲ್ಲಿ ಡಿಕಾಕ್-ರಾಹುಲ್ ವಿಧ್ವಂಸಕ ಬ್ಯಾಟಿಂಗ್ ನಿಂದಾಗಿ ಐಪಿಎಲ್ ಇತಿಹಾಸದಲ್ಲಿದ್ದ ಅನೇಕ ದಾಖಲೆಗಳು ಧೂಳಿಪಟಗೊಂಡಿದೆ.
ಇವರಿಬ್ಬರು ವೈಯಕ್ತಿಕವಾಗಿ ಮತ್ತು ಆರಂಭಿಕ ಜೋಡಿಯಾಗಿ ಹಲವಾರು ಹೊಸ ದಾಖಲೆಗಳನ್ನು ಸ್ಥಾಪಿಸಿದ್ದಾರೆ.
ಆ ದಾಖಲೆಗಳು ಹೀಗಿವೆ…
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ ಗೆ ಅಜೇಯ 210 ರನ್ ಸೇರಿಸಿದ ಡಿಕಾಕ್-ರಾಹುಲ್ ಜೋಡಿ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆರಂಭಿಕ ಜೊತೆಯಾಟವನ್ನು ಸ್ಥಾಪಿಸಿದೆ.
ಈ ಹಿಂದೆ ಸನ್‌ರೈಸರ್ಸ್ ಆರಂಭಿಕರಾದ ಜಾನಿ ಬೈರ್‌ಸ್ಟೋ-ಡೇವಿಡ್ ವಾರ್ನರ್ ಹೆಸರಿನಲ್ಲಿ ಈ ದಾಖಲೆ ಇತ್ತು.

2019ರಲ್ಲಿ ಈ ಜೋಡಿ ಮೊದಲ ವಿಕೆಟ್ ಗೆ 185 ರನ್ ಕಲೆ ಹಾಕಿತ್ತು. ಇದಕ್ಕೂ ಮುನ್ನ 2017ರ ಋತುವಿನಲ್ಲಿ ಕೆಕೆಆರ್ ಆರಂಭಿಕರಾದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್ ಮೊದಲ ವಿಕೆಟ್‌ಗೆ 184 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು.
ಅಲ್ಲದೇ ಡಿಕಾಕ್-ರಾಹುಲ್ ಜೋಡಿ ಐಪಿಎಲ್ ಇತಿಹಾಸದಲ್ಲಿ 20 ಓವರ್ ಗಳ ಕಾಲ ಕ್ರೀಸ್‌ನಲ್ಲಿದ್ದ ಏಕೈಕ ಜೋಡಿ ಎಂಬ ದಾಖಲೆ ಬರೆದಿದೆ. ಲೀಗ್ ಇತಿಹಾಸದಲ್ಲಿ ಯಾವುದೇ ಜೋಡಿ ಒಟ್ಟು 20 ಓವರ್ ಗಳ ಕಾಲ ಬ್ಯಾಟಿಂಗ್ ಮಾಡಿಲ್ಲ.
ಇನ್ನು 2017 ರಲ್ಲಿ, SRH ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ ಅಜೇಯ 139 ರನ್ ಸೇರಿಸಿದ್ದರು. ಈ ಪಂದ್ಯಕ್ಕೂ ಮುನ್ನ ಕೆಕೆಆರ್ ವಿರುದ್ಧ ಅದೇ ಅತ್ಯುತ್ತಮ ಆರಂಭಿಕ ಜೊತೆಯಾಟವಾಗಿತ್ತು.
ಐಪಿಎಲ್ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ ಮೂರನೇ ಅತ್ಯುತ್ತಮ ಜೊತೆಯಾಟ.
– ಕೊಹ್ಲಿ-ಡಿವಿಲಿಯರ್ಸ್ (229) RCB vs ಗುಜರಾತ್ ಲಯನ್ಸ್ (2016)
– ಕೊಹ್ಲಿ-ಡಿವಿಲಿಯರ್ಸ್ (215) RCB ವಿರುದ್ಧ ಮುಂಬೈ (2015)
– ಡಿಕಾಕ್-ರಾಹುಲ್ (210) ಲಕ್ನೋ ವಿರುದ್ಧ ಕೆಕೆಆರ್ (2022)
ಐಪಿಎಲ್‌ನಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ಸ್ಕೋರ್.
– ಕ್ರಿಸ್ ಗೇಲ್ (ಔಟಾಗದೆ 175) ಆರ್‌ಸಿಬಿ ವಿರುದ್ಧ ಪುಣೆ (2013)
– ಬ್ರೆಂಡನ್ ಮೆಕಲಮ್ (ಔಟಾಗದೆ 158) KKR vs RCB (2008)
– ಕ್ವಿಂಟನ್ ಡಿಕಾಕ್ (ಔಟಾಗದೆ 140) ಲಕ್ನೋ ವಿರುದ್ಧ ಕೆಕೆಆರ್ (2022)
– ಎಬಿ ಡಿವಿಲಿಯರ್ಸ್ (ಔಟಾಗದೆ 133) RCB ವಿರುದ್ಧ ಮುಂಬೈ (2015)
– ಕೆಎಲ್ ರಾಹುಲ್ (ಔಟಾಗದೆ 132) ಪಂಜಾಬ್ ವಿರುದ್ಧ RCB (2020)
de-kock-and-kl-rahul-smash-records-unbroken-opening-stand