ಮಡಿಕೇರಿ: ಇಬ್ಬರು ಮಕ್ಕಳು ಹಾಗೂ ತಾಯಿಯ ಶವವು ಪೊನ್ನಂಪೇಟೆಯ (Ponnampet) ಹೈಸೊಡ್ಲೂರು ಹತ್ತಿರದ ಕೂಟಿಯಾಲ ಹೊಳೆಯಲ್ಲಿ ಪತ್ತೆಯಾಗಿದೆ.
ಹುದಿಕೇರಿ ಗ್ರಾಮದ ಅಶ್ವಿನಿ (48), ನಿಕಿತಾ (21) ಹಾಗೂ ನವ್ಯ (18) ಎಂಬುವವರ ಶವಗಳೇ ಪತ್ತೆಯಾಗಿವೆ. ಅಶ್ವಿನಿ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿ ಅಶ್ವಿನಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಸದ್ಯ ಇವರದ್ದು ಆಕಸ್ಮಿಕ ಸಾವೇ? ಅಥವಾ ಆತ್ಮಹತ್ಯೆಯೇ ಎಂಬುವುದು ಇದುವರೆಗೆ ತಿಳಿದು ಬಂದಿಲ್ಲ. ಅಶ್ವಿನಿ ಹುದಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಪತಿ ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಎಕರೆ ಕಾಫಿ ತೋಟವನ್ನು ಕೂಡ ಇತ್ತು.
ಸ್ಥಳಕ್ಕೆ ಶ್ರೀಮಂಗಲ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.