ದೇಶವನ್ನೇ ಶೇಕ್ ಮಾಡಿದ ಡಾನ್ ಗಳು ಇವರು..! 9 ನಟೋರಿಯಸ್ GANGSTERS ಆಫ್ ಇಂಡಿಯಾ..!
ವಾಣಿಜ್ಯ ನಗರಿ ಮುಂಬೈ ಒಂದ್ ಕಡೆ ಗ್ಲಾಮರ್ ಗೆ ಫೇಮಸ್ ಆದ್ರೆ ಮತ್ತೊಂದ್ ಕಡೆ ಭಯಾನಕ ಲೋಕ ಇದೆ. ಅಂದ್ರೆ ಅಂಡರ್ ವರ್ಲ್ಡ್. ದೇಶದ ಎಲ್ಲಾ ಅಂಡರ್ ವರ್ಲ್ಡ್ ಡಾನ್ ಗಳು ಸಿಗುವುದು ಕೂಡ ಇದೇ ಮುಂಬೈ ನಲ್ಲಿ. ಇಡೀ ವಿಶ್ವವನ್ನೇ ಗಡಗಡಕವಾಡಿಸಿರುವ ಅಷ್ಟೋ ಜನ ಅಂಡರ್ ವರ್ಲ್ಡ್ ಡಾನ್ಸ್ ಇದೇ ಮುಂಬೈ ನಿಂದಲೇ ರಿಮೋಟ್ ಕಂಟ್ರೋಲ್ ಮಾಡಿದ್ದಾರೆ. ಇಡೀ ಭಾರತವನ್ನೇ ನಡುಗಿಸಿದ್ದ, ಬೆಚ್ಚಿ ಬೀಳಿಸಿದ್ದ ಅಂತಹ 9 ಡಾನ್ ಗಳು ಯಾರು….? ಏನಿವರ ಹಿಸ್ಟರಿ..?
ದಾವೊದ್ ಇಬ್ರಾಹಿಂ
ಮೋಸ್ಟ್ ವಾಂಟೆಡ್ ಡೇಂಜರಸ್ ಕ್ರಿಮಿನಲ್ . ಭಾರತದ ಡೆಡ್ಲಿ ಡಾನ್ ಅಂದ್ರೆ ಮೊದಲು ದಾವೋದ್ ಹೆಸರೇ ನೆನಪಾಗೋದು. ಈತ ದೊಡ್ಡ ದೇಶ ದ್ರೋಹಿ. ಪಾತಕ ಲೋಕದ ಬಾದ್ ಶಾ ದಾವೋದ್ ಇಬ್ರಾಹಿಂ ಚಿಕ್ಕ ವಯಸ್ಸಿನಲ್ಲಿ ಅನೇಕ ಗ್ಯಾಂಗ್ ವಾರ್ ಗಳನ್ನ ನೋಡಿದ್ದ. ಇದು ಆತನ ಜೀವನದ ಮೇಲೆ ತುಂಬ ಪ್ರಭಾವ ಬೀರಿತ್ತು. ಮುಂದೆ ಈತ ಡಾನ್ ಕರೀಮ್ ಲಾಲಾ ಜೊತೆಗೆ ಕೈ ಮಿಲಾಯಿಸಿದ್ದ. ಬಳಿಕ ಸ್ವಂತ ಗ್ಯಾಂಗ್ ಶುರು ಮಾಡಿದ್ದ. ಅದಕ್ಕೆ ಡಿ ಕಂಪನಿ ಎಂಬ ಹೆಸರು ಕೊಟ್ಟಿದ್ದ. ಬ್ಲಾಕ್ ಮೇಲಿಂಗ್, ರೊಲ್ ಕಾಲ್, ಕಿಡ್ನಾಪ್, ಹೀಗೆ ಒಂದಾದ ಮೇಲೊಂದು ಕ್ರೈಮ್ ಗಳನ್ನ ಮಾಡುತ್ತಾ ಹೋದ. ಆದ್ರೆ ಈತ ಮಾಡಿಧ ದೊಡ್ಡ ಕ್ರೈಂ ಮುಂಬೈ ಬಾಂಬ್ ಬ್ಲಾಸ್ಟ್ 1993. ಈ ಪ್ರಕರಣದ ಪ್ರಮುಖ ಆರೋಪಿ ದಾವೋದ್ ಗಾಗಿ ಇಂದಿಗೂ ಪೊಲೀಸರು ಹುಡುಕಾಟ ನಡೆಸ್ತಾಯಿದ್ದಾರೆ. ಈತ ಸತ್ತಿದ್ದಾನೆ ಎಂದು ಕೆಲ ಮೂಲಗಳು ತಿಳಿಸಿದ್ರೆ ಈತ ಇನ್ನೂ ಬದುಕಿರೋದಾಗಿ ಮತ್ತೆ ಕೆಲ ವದಂತಿಗಳು ಹೇಳುತ್ತವೆ. ಆದ್ರೆ ಈತ ಪಾಕಿಸ್ತಾನದಲ್ಲಿದ್ದಾನೆ ಅಥವ ಇದ್ದ ಎನ್ನುವುದು ಮಾತ್ರವೇ ಗೊತ್ತಿರುವ ವಿಚಾರ.
ಚೋಟಾ ರಾಜನ್
ನಾಮ್ ತೋ ಸುನಾ ಹೀ ಹೋಗಾ… ಈತನ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಈತ ಒಬ್ಬ ಡೆಡ್ಲಿ ಡಾನ್ ಅಂದ್ರೂ ತಪ್ಪಾಗೋದಿಲ್ಲ. ಹೆಸ್ರು ಚೋಟೇ ಆದ್ರೂ ಈತ ಮಾಡಿರೋದು ಖತರ್ ನಾಕ್ ಕ್ರೈಮ್ ಗಳನ್ನೇ. ಹೀಗಾಗಿಯೇ ಈತ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಡಾನ್ ಗಳ ಪಟ್ಟಿಗೆ ಸೇರುತ್ತಾನೆ. ಮುಂಬೈನಲ್ಲಿ ಜನಿಸಿದ್ದ ಈ ಚೊಟಾ ರಾಜನ್ 10 ವರ್ಷದ ವಯಸ್ಸಿನಿಂದಲೇ ಕ್ರೈಂ ಮಾಡೋದಕ್ಕೆ ಶುರು ಮಾಡಿದ್ದ. ಸಿನಿಮಾ ಟಿಕೆಟ್ ಗಳನ್ನ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದ ಈತ ಬಡಾ ರಾಜನ್ ಜೊತೆಗೆ ಪಾತಕ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ. ಮುಂದೆ ಬಡಾ ರಾಜನ್ ಸತ್ತಾಗ ಈತ ಗ್ಯಾಂಗ್ ನ ಲೀಡರ್ ಆದ. ಅಷ್ಟೇ ಅಲ್ಲ ಮುಂದೆ ಈತ ಮತ್ತೋರ್ವ ಕುಖ್ಯಾತ ಡಾನ್ ದಾವೋದ್ ಇಬ್ರಾಹಿಂ ಜೊತೆಗೆ ಕೈ ಮಿಲಾಯಿಸಿ ಡ್ರಗ್ಸ್ ದಂಧೆಗೆ ಇಳಿದಿದ್ದ. ಕಿಡ್ನಾಪಿಂಗ್ ಫಿಲ್ಮ್ ಫಂಡಿಂಗ್ ಹೀಗೆ ನಾನಾ ಮಾರ್ಗಗಳಿಂದ ದುಡ್ಡು ಸಂಪಾದನೆ ಮಾಡಿದ. ಅಂದ್ಹಾಗೆ ಈತ ತಿಹಾರ್ ಜೈಲ್ ನಲ್ಲಿ ಕಂಬಿ ಎಣಿಸುತ್ತಿದ್ದು, ಈತನ ವಿರುದ್ಧ 80 ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲಿಸಲಾಗಿದೆ.
ರವಿ ಪೂಜಾರಿ
ಕರ್ನಾಟಕ ಮಂಗಳೂರು ಮೂಲದ ರವಿ ಪೂಜಾರಿ 200 ಕ್ಕೂ ಹೆಚ್ಚು ಕೇಸ್ ಗಳಲ್ಲಿ ಬೇಕಾದ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಈತನನ್ನ ಬೆಂಗಳೂರು ಪೊಲೀಸರು 2020 ರ ಫೆಬ್ರವರಿ 24ರಲ್ಲಿ ಸೌತ್ ಆಫ್ರಿಕಾದಲ್ಲಿ ಅರರೆಸ್ಟ್ ಮಾಡಿದ್ದರು. ಕೊಲೆ , ಕೊಲೆ ಯತ್ನ, ಲೂಟಿ, ದರೋಡೆ ಸೇರಿ ಹಲವು ಪ್ರಕರಣಗಳು ಈತನ ಮೇಲಿವೆ. ಆರಂಭದಲ್ಲಿ ಈತ ಚೋಟಾ ರಾಜನ್ ಜೊತೆಗೆ ಕೆಲಸ ಮಾಡಿದ್ದ. ಮುಂಬೈ ಬ್ಲಾಸ್ಟ್ ನ ನಂತರ ಚೋಟಾ ರಾಜನ್ ಜೊತೆ ಬಿಟ್ಟು ರವಿ ಪೂಜಾರಿ ಸ್ವಂತ ಗ್ಯಾಂಗ್ ಕಟ್ಟಿಕೊಂಡಿದ್ದ. ಕಿಡ್ನಾಪ್, ಬ್ಲಾಕ್ ಮೇಲ್, ಡ್ರಗ್ಸ್ ಸ್ಮಗ್ಲಿಂಗ್ ಹೀಗೆ ಅನೇಕ ಕ್ರೈಮ್ ಗಳನ್ನ ಶುರುಮಾಡಿದ್ದ ರವಿ ಪೂಜಾರಿಯ ಪಾತಕ ಸಮ್ರಾಜ್ಯ ದೊಡ್ಡದಾಗುತ್ತಲೇ ಹೋಯ್ತು. ಅಷ್ಟೇ ಅಲ್ಲ ಬಾಲಿವುಡ್ ನಟ ನಟಿಯರಿಂದಲೂ ಹಣದ ಡಿಮ್ಯಾಂಡ್ ಮಾಡೋದಕ್ಕೆ ಶುರು ಮಾಡಿದ್ದ ರವಿ ಪೂಜಾರಿ.
ಅಬು ಸಲೀಮ್
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ದ ಅಬುಗೆ ಇಡೀ ಪರಿವಾರವನ್ನ ನಡೆಸುವ ಜವಾಬ್ದಾರಿ ಹೆಗಲಿಗೆ ಬಂದಿತ್ತು. ಆರಂಭದಲ್ಲಿ ಜೀವನ ನಡೆಸುವುದಕ್ಕಾಗಿ ಮೆಕಾನಿಕ್ ಆಗಿ ಕೆಲಸ ಮಾಡ್ತಿದ್ದ ಈತ ವಿದ್ಯಾಭ್ಯಾಸದ ನಂತರ ಮನೆಯಿಂದ ಓಡಿ ಹೋಗಿ ದೆಹಲಿ ಸೇರಿದ್ದ. ದೆಹಲಿಯಲ್ಲಿ ಕೆಲ ಸಮಯ ಅಲೆದಾಡಿದ್ದ ನಂತರ ಈತ ಮುಂಬೈ ಸೇರಿದ್ದ. ಶುರುವಿನಲ್ಲಿ ಚಿಕ್ಕಪುಟ್ಟ ಕೆಸಲಗಳನ್ನ ಮಾಡ್ತಿದ್ದ ಈತ ರಿಯಲ್ ಎಸ್ಟೇಟ್ ಗೆ ಕಾಲಿಟ್ಟಿದ್ದ. ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಾ ಈತ ಕ್ರಿಮಿಲ್ಸ್ ಗಳ ಸಂಪರ್ಕ ಬೆಳೆಸಿಕೊಂಡಿದ್ದ. ಇದಾದ ನಂತರ ಕ್ರೈಮ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಬಳಿಕ ದಾವೋದ್ ಇಬ್ರಾಹಿಂ ನಂತಹ ದೊಡ್ಡ ದೊಡ್ಡ ಅಂಡರ್ ವರ್ಲ್ಡ್ ಡಾನ್ ಗಳ ಜೊತೆಗೆ ಸಂಪರ್ಕ ಬೆಳಸಿದ ಅಬು ಅನೇಕ ಕ್ರೈಮ್ ಗಳಲ್ಲಿ ಶಾಮೀಲಾಗಿದ್ದ. ಸಿನಿಮಾ ಸ್ಟಾರ್ ಗಳಿಗೆ ಧಮ್ಕಿ ಹಾಕೋದಕ್ಕೂ ಶುರು ಮಾಡಿದ್ದ. ಅಷ್ಟೇ ಅಲ್ಲ ಈತ ಸಿನಿಮಾ ರಂಗದಲ್ಲೇ ಗುರುತಿಸಿಕೊಮಡಿದ್ದ ಮೋನಿಕಾಳನ್ನ ಮದುವೆ ಕೂಡ ಆಗಿದ್ದ. ಈತನ ಪತ್ನಿ ಮೋನಿಕಾ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ ಒಂದರಲ್ಲಿ ಸ್ಪರ್ಧಿ ಕೂಡ ಆಗಿದ್ದರು.
ವರಧರಾಜನ್ ಮೊದಲಿಯರ್
ಮದ್ರಾಸ್ ನಿಂದ ಹಿಡಿದು ಮುಂಬೈವರೆಗೂ ತನ್ನ ಪ್ರಕೋಪ ಬೀರಿದ್ದ ಈತ ತನ್ನ ಕಾಲದ ಅತ್ಯಂತ ಡೇಂಜರಸ್ ಡಾನ್ ಎಂದೇ ಬಿಂಬಿಸಲಾಗುತ್ತೆ. ಮದ್ರಾಸ್ ಮೂಲದ ಈತ 1908 ರಿಂದ 1980ರವರೆಗೂ ಕರೀಮ್ ಲಾಲ್ ಸೇರಿ ಹಲವು ಅಪಾಯಕಾರಿ ಡಾನ್ ಗಳ ಜೊತೆಗೆ ಕೆಲಸ ಮಾಡ್ತಿದ್ದ. ಆದ್ರೆ ಈತ ಮುಂಬೈಗೆ ತೆರಳಿದ್ದು ಒಂದೊಳ್ಳೆ ಕೆಲಸ ಹುಡುಕಿ ಜೀವನ ನಡೆಸುವ ಉದ್ದೇಶದಿಂದ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಈತನಿಗೆ ಕೆಲಸ ಸಿಗದೇ ನಿರುದ್ಯೋಗದಿಂದ ಬೇಸತ್ತು ಪಾತಕ ಜಾಗತ್ತಿಗೆ ಪಾದಾರ್ಪಣೆ ಮಾಡಿದ್ದ. ಮೊದಲಿಗೆ ಅಕ್ರಮ ಮದ್ಯ ಮಾರಾಟಗಾರರ ಜೊತೆಗೆ ಸೇರಿದ್ದ ಈತ ನಿಧಾನವಾಗಿ ತನ್ನ ಸಾಮ್ರಾಜ್ಯವನ್ನ ಭದ್ರಗೊಳಿಸಿಕೊಂಡಿದ್ದ, ದೊಡ್ಡ ಗ್ಯಾಂಗ್ ಅನ್ನೇ ಕಟ್ಟಿಕೊಂಡಿದ್ದ.
ಟೈಗರ್ ಮೆಮನ್
ಈತ ಸಾಮಾನ್ಯ ಡಾನ್ ಅಲ್ಲ ದೇಶ ದ್ರೋಹಿ ಕೂಡ ಹೌದು. ಯಾಕಂದ್ರೆ, ಇಡೀ ದೇಶ ಮಾತ್ರ ಅಲ್ಲ ವಿಶ್ವವನ್ನೇ ಬೆಚ್ಚಿ ಬೀಳಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದ ಮುಂಬೈ ಬ್ಲಾಸ್ಟ್ 1993 ಪ್ರಕರಣದಲ್ಲೂ ಈತನ ಕೈವಾಡವಿತ್ತು ಎನ್ನಲಾಗಿದೆ. ಒನ್ ಆಫ್ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಇಂದಿಗೂ ಸಿಬಿಐ, ಇಂಟರ್ ಪೂಲ್ ನಂತಹ ಹಲವಾರು ಇಂಟೆಲಿಜೆನ್ಸ್ ವಿಭಾಗಗಳು ಇವನ ಹುಡುಕಾಟದಲ್ಲಿ ತೊಡಗಿವೆ. ಆದ್ರೆ ಗುಪ್ತಚರ ಇಲಾಖೆಯ ಮಾಹಿತಿಗಳನ್ನ ನೋಡೋದಾದ್ರೆ ಈತ ಸದ್ಯ ಉಗ್ರರ ತವರು ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆದಿದ್ದಾನಂತೆ. ಇನ್ನೂ ಕೆಲ ಮೂಲಗಳ ಪ್ರಕಾರ ಈ ತ ಬದುಕಿಯೇ ಇಲ್ಲ ಎಂದೂ ಕೂಡ ಹೇಳಲಾಗುತ್ತೆ.
ಹಾಜಿ ಮಸ್ತಾನ್
ಅಮಿತಾಬ್ ಬಚ್ಚನ್ ಅಭಿನಯದ ದೀವಾರ್ ಸಿನಿಮಾ ಎಲ್ರಿಗೂ ಗೊತ್ತೇ ಇರುತ್ತೆ. ಆದ್ರೆ ಈ ಸಿನಿಮಾ ಮಾಡೋದಕ್ಕೆ ಸ್ಪೂರ್ತಿ ಹಾಜಿ ಮಸ್ತಾನ್ ಜೀವನ. ಹೌದು ಮುಂಬೈನ ಪಾತಕ ಜಗತ್ತನ್ನ ವರ್ಷಾನುಗಟ್ಟಲೆ ಆಳಿದ ಹಾಜಿ ಮಸ್ತಾನ್ ತಮಿಳುನಾಡು ಮೂಲದವ. ಹಾಜಿ ಮಸ್ತಾನ್ ಬಾಲ್ಯ ಅತ್ಯಂತ ಬಡತನದಿಂದಲೇ ಕಳೆದುಹೋಗಿತ್ತು. ಆದ್ರೆ ಆಶ್ಚರ್ಯಕರ ಸಂಗತಿ ಎಂದ್ರೆ ಹಾಜಿ ಮಸ್ತಾನ್ ತನ್ನ ಜೀವನದಲ್ಲಿ ಯಾವತ್ತೂ ಯಾರನ್ನೂ ಕೊಲೆ ಮಾಡಿಲ್ಲ. ಯಾರ ಮೇಲೂ ಗುಂಡು ಹಾರಿಸಿಲ್ಲ. ಆದ್ರೂ ಜನರು ಈತನ ಹೆಸರು ಕೇಳಿದ್ರೆ ಬೆಚ್ಚಿ ಬೀಳ್ತಿದ್ರು ಅನ್ನೋದು ಸುಳ್ಳಲ್ಲ. ಯಾಕಂದ್ರೆ ಈತ ಎಲ್ಲಾ ಅಕ್ರಮ ಚಟುವಟಿಕೆಗಳನ್ನ ತನ್ನ ಗ್ಯಾಂಗ್ ನ ಸದಸ್ಯರಿಂದಲೇ ಮಾಡಿಸುತ್ತಿದ್ದ.
ಕರೀಮ್ ಲಾಲಾ
ಶ್ರೀಮಂತ ಮನೆತನದಲ್ಲೇ ಹುಟ್ಟಿದ್ರೂ ಕರೀಮ್ ಲಾಲಾ ಮತ್ತಷ್ಟು ಹಣ ಸಂಪಾನೆ ಮಾಡುವ ದುರಾಸೆಗೆ ಬಿದ್ದು ಪಾತಕ ಲೋಕಕ್ಕೆ ಎಂಟ್ರಿಕೊಟ್ಟಿದ್ದ. ಇದೇ ಉದ್ದೇಶದಿಂದ ಮುಂಬೈಗೆ ಕಾಲಿಟ್ಟಿದ್ದ ಕರೀಮ್ ಅನೇಕ ಅಪರಾಧಗಳಲ್ಲಿ ಶಾಮೀಲಾಗಿದ್ದ, ಜೂಜು ಅಡ್ಡಾಗಳು ಬಾರ್ ಗಳನ್ನೂ ತೆರೆದಿದ್ದ.
ಮನ್ಯಾ ಸುರ್ವೇ
ಮುಂಬೈನ ಖತರ್ನಾಕ್ ಅಂಡರ್ ವರ್ಲ್ಡ್ ಡಾನ್ ಗಳಲ್ಲಿ ಅತಿ ಹೆಚ್ಚು ಡೆಡ್ಲಿ ಅಂತಾನೇ ಕರೆಸಿಕೊಳ್ತಿದ್ದ. ಈತನನ್ನ ಪೊಲೀಸರು ಎನ್ ಕೌಂಟರ್ ನಲ್ಲಿ ಉಡಾಯಿಸಿದ್ದರು. ಆದ್ರೆ ಈತ ಎನ್ಕೌಂಟರ್ ನಲ್ಲಿ ಸಾವನಪ್ಪಿರಲಿಲ್ಲ ಅಂದ್ರೆ ಡೇಂಜರಸ್ ಡಾನ್ ದಾವೋದ್ ಇಬ್ರಾಹಿಂ ನ ಖೇಲ್ ಖತಮ್ ಮಾಡ್ತಿದ್ದನಂತೆ. ಮೊದಲು ಈತ ಡಿಗ್ರಿ ಮುಗಿಸುತ್ತಿದ್ದಂತೆ ಒರ್ವ ವ್ಯಕ್ತಿಯ ಕೊಲೆ ಮಾಡಿದ್ದ ಬಳಿಕ ಜೀವಾವಧಿ ಶಿಕ್ಷೆಗೂ ಗುರಿಯಾಗಿದ್ದ ಆದ್ರೆ ಅನಾರೋಗ್ಯದ ನೆಪವೊಡ್ಡಿ ಜೈಲಿನಿಂದ ತಪ್ಪಿಸಿಕೊಂಡಿದ್ದ. ಜೈಲಿನಿಂದ ತಪ್ಪಿಸಿಕೊಳ್ತಿದ್ದಂತೆ ಮನ್ಯಾ ತನ್ನ ಸ್ವಂತ ಗ್ಯಾಂಗ್ ಕಟ್ಟಿಕೊಂಡಿದ್ದ. ಇದಾದ ಬಳಿಕ ಸರಣಿ ದರೊಡೆ, ಕೊಲೆ, ಲೂಟಿ, ಕಿಡ್ನಾಪಿಂಗ್ ಮಾಡೋದಕ್ಕೆ ಶುರುಮಾಡಿದ್ದ. ಮುಂದೊಂದು ದಿನ ಈತನ ಅದೃಷ್ಟ ಕೈಕೊಟ್ಟ್ಟು ಪೊಲೀಸರ ಕೈಗೆ ತಗಲಾಕಿಕೊಮಡಿದ್ದ. ಆಗಲೇ ಈತನನ್ನ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಅಷ್ಟೇ ಅಲ್ಲ ಈತನ ಎನ್ ಕೌಂಟರ್ ಲೈಫ್ ಹಿಸ್ಟರಿ ಬೇಸ್ ಆಗಿಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾವನ್ನೇ ತೆಗೆದಿದ್ದಾರೆ. ಶೂಟ್ ಔಟ್ ಅಟ್ ವಡಾಲಾ ಸಿನಿಮಾ. ಸಿನಿಮಾದಲ್ಲಿ ಜಾನ್ ಅಬ್ರಹಂ ಮುಖ್ಯ ಭೂಮಿಕೆ ನಿಬಾಯಿಸಿದ್ದಾರೆ.
ಹಿಂದಿಗೆ ‘ಮೇ ಐ ಕಮಿನ್’ ಅಂತಿದ್ದಾರೆ ರಾಖಿ ಭಾಯ್..!
‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..?