ಬೆಂಗಳೂರು: ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ವಂಚಿಸಿರುವ ಪ್ರಕರಣದಡಿ ಜೈಲು ಪಾಲಾಗಿರುವ ಟೈತ್ರಾ ಅವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗದ್ದಾರೆ.
ಉದ್ಯಮಿ ಗೋವಿಂದಬಾಬು ಅವರಿಗೆಟಿಕೆಟ್ ಕೊಡಿಸುವುದಾಗಿ ವಂಚಿಸಿ ಪರಪ್ಪನ ಅಗ್ರಹಾರ ಸೇರಿದ್ದ ಚೈತ್ರಾ ಅವರಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಡಿಸೆಂಬರ್ 4ರಂದು (Court) ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಐದು ಕೋಟಿ ರೂ. ಹಣ ಪಡೆದು ಚೈತ್ರಾ ವಂಚಿಸಿದ್ದರು. ಈ ಕುರಿತು ಉದ್ಯಮಿ ದೂರು ನೀಡಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಹೀಗಾಗಿ ಚೈತ್ರಾ ಹಾಗೂ ಶ್ರೀಕಾಂತ್ ಅವರನ್ನು ಸೆಪ್ಟೆಂಬರ್ 13 ರಂದು ಬಂಧಿಸಿದ್ದರು. ಅಲ್ಲದೇ, ಇನ್ನುಳಿದ ಆರೋಪಿಗಳಾದ ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಬಂಧಿತರಾಗಿದ್ದರು.