ಪ್ರೀತಿಯ ವಿರಾಟ್… Thank You & We Will Always Love You

1 min read
Kohli's saaksha tv

ಪ್ರೀತಿಯ ವಿರಾಟ್… Thank You & We Always Love You

ಧನ್ಯವಾದಗಳು… ಎಂಎಸ್ ಧೋನಿಯ ಉತ್ತರಾಧಿಕಾರಿಯಾಗಿ ಅಂದು ಟೀಂ ಇಂಡಿಯಾದ ಸಾರಥ್ಯವಹಿಸಿದ್ದಕ್ಕಾಗಿ…

ಧನ್ಯವಾದಗಳು.. ಮತ್ತೊಬ್ಬ ಧೋನಿ ಅನ್ನೋ ಒತ್ತಿದ್ರೂ ನಗುತ್ತಾ ಆ ಟ್ಯಾಗ್ ಅನ್ನ ಸ್ವೀಕರಿಸಿದ್ದಕ್ಕಾಗಿ..

Virat saaksha tv

ಧನ್ಯವಾದಗಳು… ನಿಮ್ಮ ಆಕ್ರಮಣಶೀಲತೆಯೊಂದಿಗೆ ಆಟಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದ್ದಕ್ಕಾಗಿ

ಧನ್ಯವಾದಗಳು.. ರನ್ ಮಿಷಿನ್ ಅಂತಾ ಹೊಗಳಿದ ನಾವೇ ಭಾರತ ಸೋತಾಗ ನಿಮ್ಮನ್ನ ತೆಗಳಿದ್ರೂ ಲೆಕ್ಕಿಸದೇ ಇದದ್ದಕ್ಕಾಗಿ..

ಧನ್ಯವಾದಗಳು… ನಿನ್ನ ಕಿಂಗ್ ಕೊಹ್ಲಿ ಎಂದ ನಾವೇ ಪಾಕಿಸ್ತಾನದ ವಿರುದ್ಧದ ಸೋಲು ಸಹಿಸಲಾಗದೇ ನಿನ್ನ ಕುಟುಂಬವನ್ನ ಟೀಕಿಸಿದರೂ ನಮ್ಮನ್ನ ಕ್ಷಮಿಸಿದ್ದಕ್ಕಾಗಿ..

ಧನ್ಯವಾದಗಳು… ದೇಶಕ್ಕಾಗಿ.. ಕ್ರಿಕೆಟ್ ಗಾಗಿ ಸಮರ್ಪಣಾ ಭಾವದಿಂದ ನಿನ್ನ ಜವಾಬ್ದಾರಿ ಪೂರೈಸಿದ್ದಕ್ಕಾಗಿ..

Virat saaksha tv

ಧನ್ಯವಾದಗಳು… ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮುರಿಯಬಲ್ಲ ಆಟಗಾರ ಹುಟ್ಟುವುದಿಲ್ಲ ಎಂಬ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಕ್ಕಾಗಿ..
ಆ ಆಟದ ಮೂಲಕ ನಮಗೂ ಖುಷಿ ಕೊಟ್ಟಿದ್ದಕ್ಕಾಗಿ

ಧನ್ಯವಾದಗಳು.. ಇಷ್ಟು ವರ್ಷ ಟಿ 20 ನಾಯಕನಾಗಿ ನಿನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಕ್ಕಾಗಿ..

ಚುಟುಕು ಕ್ರಿಕೆಟ್ ನಲ್ಲಿ ನಿನ್ನ ಮುದ್ರೆ ಒತ್ತಿದ್ದಕ್ಕಾಗಿ

50 ಟಿ20 ಪಂದ್ಯಗಳು .. 32 ಗೆಲುವು.. 16 ಸೋಲುಗಳು.. ಟ್ರೋಫಿ ಗೆಲ್ಲಲಾಗಲಿಲ್ಲ ಆದರೆ ನಮ್ಮ ಮನಸ್ಸು ಗೆದ್ದಿದ್ದೀಯಾ..

ನೀನು ಯಾವಾಗಲೂ ನಮಗೆ ರಾಜನೇ ‘ಕಿಂಗ್’..!! ಎಂದಿಗೂ ನಮ್ಮ ಆರಾಧ್ಯ ಕ್ರಿಕೆಟಿಗನೇ!! ಲವ್ ಯು ವಿರಾಟ್..!!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd