ಮಂಗಳೂರು: ಹೆಬ್ಬಾವಿನ (Python) ಮರಿ ಎಂದು ವಿಷದ (Venom) ಹಾವಿನ ಮರಿ ಹಿಡಿದು ಕಚ್ಚಿಸಿಕೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ. ಬಂಟ್ವಾಳ ನಿವಾಸಿ 58 ವರ್ಷದ ರಾಮಚಂದ್ರ ಪೂಜಾರಿ ಸಾವನ್ನಪ್ಪಿರುವ ದುರ್ದೈವಿ. ಮೃತ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.
ಆದರೆ, ಸೆ. 4ರಂದು ಹಾವಿನ ಮರಿ ಕಾಣಿಸಿಕೊಂಡಿದ್ದು, ವಿಷಪೂರಿತ ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ರಾಮಚಂದ್ರ ಪೂಜಾರಿ ಹಿಡಿದಿದ್ದರು. ಆಗ ಮರಿ ಕಚ್ಚಿದೆ. ಅದು ಹೆಬ್ಬಾವಿನ ಮರಿ ಎಂದು ನಿರ್ಲಕ್ಷಿಸಿದ್ದಾರೆ. ಆನಂತರ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.