ಕೊರೋನವೈರಸ್ ತಗುಲಿದ್ದ ಮೊದಲ ಸಾಕು ನಾಯಿ ಸಾವು
ನ್ಯೂಯಾರ್ಕ್, ಅಗಸ್ಟ್ 3: ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊರೋನವೈರಸ್ ತಗುಲಿದ್ದ ಜರ್ಮನ್ ಶೆಫರ್ಡ್ ಸಾಕು ನಾಯಿ ಸಾವನ್ನಪ್ಪಿದೆ.
ನ್ಯಾಷನಲ್ ಜಿಯಾ ಗ್ರಾಫಿಕ್ ವರದಿಯ ಪ್ರಕಾರ, ನಾಯಿಯ ಮಾಲೀಕರು ಅದರ ಅನಾರೋಗ್ಯದ ಹಿನ್ನೆಲೆಯಲ್ಲಿ ಅದಕ್ಕೆ ದಯಾಮರಣ ನೀಡಲು ನಿರ್ಧರಿಸಿದ್ದರು.
ಅದು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು ಮತ್ತು ತೂಕ ಕಳೆದುಕೊಂಡಿತ್ತು. ಹಲವಾರು ಪಶುವೈದ್ಯರು, ಔಷಧಿಗಳು, ಸ್ಟೀರಾಯ್ಡ್ಗಳು ಮತ್ತು ಇತರ ವೈದ್ಯಕೀಯ ಚಿಕಿತ್ಸೆಯ ನಂತರವೂ ಅದರ ಆರೋಗ್ಯವು ತೀವ್ರವಾಗಿ ಕುಸಿಯಿತು. ಈ ಹಿನ್ನೆಲೆಯಲ್ಲಿ ಪಶುವೈದ್ಯರು ಅದಕ್ಕೆ ಕೊರೋನಾ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಧೃಡಪಟ್ಟಿರುವುದು ಕಂಡು ಬಂತು. ಹೆಪ್ಪುಗಟ್ಟಿದ ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದ ನಂತರ ಅದರ ರಕ್ತ ಪರೀಕ್ಷೆ ನಡೆಸಿದಾಗ ದುಗ್ಧರಸ ಗ್ರಂಥಿಗಳ ಕ್ಯಾನ್ಸರ್ ಇರುವುದು ಬಹುತೇಕ ಖಚಿತವಾಗಿತ್ತು.
ನಾಯಿಯ ಸಾವಿಗೆ ಕೊರೋನವೈರಸ್ ಕಾರಣವೇ ಎಂಬುದು ಖಚಿತವಾಗಿಲ್ಲ. ದುಗ್ಧರಸ ಗ್ರಂಥಿಗಳ ಕ್ಯಾನ್ಸರ್ ಕೂಡ ಸಾವಿಗೆ ಕಾರಣವಾಗಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ.
ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನಾಯಿಯ ದೇಹವನ್ನು ನೆಕ್ರೋಪ್ಸಿಗಾಗಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲು ಪಶುವೈದ್ಯರೊಂದಿಗೆ ಸೂಚನೆಗಳನ್ನು ಹಂಚಿಕೊಂಡಾಗ, ದೇಹವನ್ನು ಆಗಾಗಲೇ ದಹನ ಮಾಡಲಾಗಿತ್ತು.
ಹಲವಾರು ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಸಾಕುಪ್ರಾಣಿಗಳು ಮನುಷ್ಯರಂತೆ ಸುಲಭವಾಗಿ ವೈರಸ್ ಅನ್ನು ಹರಡುವುದಿಲ್ಲ ಮತ್ತು ಪ್ರಾಣಿಗಳು ವೈರಸ್ ಅನ್ನು ಮನುಷ್ಯರಿಗೆ ಹರಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಲಾಗಿದೆ.