ಗಮನಿಸಿ ಈ ತಿಂಗಳು ಒಟ್ಟಿಗೆ 4 ದಿನ ಬ್ಯಾಂಕ್ ಗಳಿಗೆ ರಜೆ..!
ನವದೆಹಲಿ : ಈ ತಿಂಗಳು ಅಂದ್ರೆ ಡಿಸೆಂಬರ್ ನಲ್ಲಿ ಮುಂದಿನ ವಾರ ಒಟ್ಟಿಗೆ 4 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ.. ಹೀಗಾಗಿ ಈಗಲೇ ಬ್ಯಾಂಕಿನ ವಹಿವಾಟುಗಳನ್ನ ಮುಗಿಸಿಕೊಳ್ಳಿ.. ಬ್ಯಾಂಕ್ ಗಳಿಗೆ ರಜೆ ಇದ್ರೂ ಕೂಡ ಆನ್‍ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರಲಿದೆ..
ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16 ಅಂದ್ರೆ ಗುರುವಾರ ಹಾಗೂ 17 ಅಂದ್ರೆ ಶುಕ್ರವಾರ ಬ್ಯಾಂಕ್‍ಗಳು ಬಂದ್ ಆಗಿರಲಿವೆ.. ಭಾರತದ ಎಲ್ಲಾ ರಾಜ್ಯಗಳಲ್ಲಿ ನಾಲ್ಕೂ ದಿನಗಳ ಕಾಲ ಬ್ಯಾಂಕ್‍ಗಳು ಮುಚ್ಚಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬ್ಯಾಂಕ್ ಮುಷ್ಕರ ಹೊರತುಪಡಿಸಿ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಆಚರಿಸುವ ಹಬ್ಬಗಳಿಗಾಗಿ ಉಳಿದ ಒಂದು ದಿನದ ರಜೆಯನ್ನು ಹೊಂದಿರುತ್ತದೆ.
ಉಳಿದಂತೆ ಕೆಲವೆಡೆ ( ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳು ಅಲ್ಲ ) ಡಿಸೆಂಬರ್ 18 ರಂದು ಬಂದ್ ಇರಲಿದೆ.. ಕಾರಣ ಯು ಸೋಸೋ ಮರಣ ವಾರ್ಷಿಕೋತ್ಸವ ( ಶಿಲ್ಲಾಂಗ್).. ಇನ್ನೂ ಡಿಸೆಂಬರ್ 19 ಭಾನುವಾರವಾಗಿರುವುದರಿಂದ ಸಾಮಾನ್ಯವಾಗಿಯೇ ಬ್ಯಾಂಕ್ ಬಂದ್ ಆಗಿರಲಿದೆ..