ಭಾರತವು ಐತಿಹಾಸಿಕ ಸಾಧನೆ ಮಾಡಿದ್ದು, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡ್ ಆಗಿದೆ. ಈ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಶಕ್ತಿ ಪಾಯಿಂಟ್ ಎಂದು ಹೆಸರು ಇಟ್ಟಿದ್ದಾರೆ. ಹೊಸ ಹೆಸರನ್ನು ಇಸ್ರೋ ಸ್ವಾಗತಿಸಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲು ಸ್ವಾಮೀಜಿ ಚಕ್ರಪಾಣಿ ಮಹಾರಾಜ್ ಮನವಿ ಮಾಡಿದ್ದಾರೆ.
ಅಲ್ಲದೇ, ಶಿವಶಕ್ತಿ ಪಾಯಿಂಟ್ ಚಂದ್ರನ ರಾಜಧಾನಿ ಮಾಡಿ ಎಂದು ಹೇಳಿದ್ದಾರೆ. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿ ಈಗಾಗಲೇ ಕಾರ್ಯಾರಂಭಿಸಿದೆ. ಹಲವು ಚಿತ್ರಗಳು, ವಿಡಿಯೋಗಳನ್ನು ಇಸ್ರೋ ಕೇಂದ್ರಕ್ಕೆ ರವಾನಿಸಿದೆ. ಚಂದ್ರನ ಮೇಲಿನ ತಾಪಮಾನವನ್ನು ಜಗತ್ತಿಗೆ ಬಹಿರಂಗಪಡಿಸಲಾಗಿದೆ. ಸ್ವಾಮಿ ಚಕ್ರಪಾಣಿ ಮಹಾರಾಜ್ ನೀಡಿದ ಸ್ಪೋಟಕ ಹೇಳಿಕೆಯನ್ನು ಹಲವು ಹಿಂದೂ ಸಂಘಟನೆಗಳು ಸ್ವಾಗತಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ.