ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆ

1 min read
Police Saaksha Tv

ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆ Saaksha Tv

ಬೆಂಗಳೂರು: ಉದ್ಯಾನವನ ನಗರಿ ದೇಶದ ಎಲ್ಲ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಇಲ್ಲಿಯ ವಾತಾವರಣ, ಉದ್ಯೋಗ ಸೃಷ್ಟಿ, ಜೀವನ ಶೈಲಿ ಎಲ್ಲರಿಗು ಇಷ್ಟವಾಗುತ್ತದೆ. ಹಾಗೇ ಇಗ ಮತ್ತೊಂದು ಸುದ್ದಿ ಬೆಂಗಳೂರಿಗರಿಗೆ ಸಂತಸ ಮೂಡಿಸಿದೆ. ಅದು ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ 2021ರಲ್ಲಿ ಅಪರಾಧ ಪ್ರಕರಣಗಳು ಕಡಿಮೆ ದಾಖಲಾಗಿವೆ. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಸುರಕ್ಷಿತವಾಗಿದೆ. ಎಂದು ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

Crime Saaksha Tv

ಹೋದ ವರ್ಷ ಅಕ್ಟೋಬರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ಈ ವೇಳೆ ಪುನೀತ್ ಅವರ ದರ್ಶನಕ್ಕಾಗಿ ಲಕ್ಷಾಂತರ ಜನ ರಾಜಧಾನಿಯತ್ತ ಹರಿದು ಬಂದಿದ್ದರು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ಪೊಲೀಸರು ಯಶಸ್ವಿಯಾಗಿ ನಿರ್ವಹಿಸಿದ್ದರು.

2021ರಲ್ಲಿ 28 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿದ್ದುಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ 40 ರೌಡಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದ್ದು, ಇದು ರೌಡಿಸಂ ನಿಯಂತ್ರಣವನ್ನು ತೋರಿಸುತ್ತದೆ. ಕಳೆದ ವರ್ಷ ಅಂದರೆ 2021ರಲ್ಲಿ 825 ಅಪಹರಣ ಕೇಸ್ ಗಳಲ್ಲಿ 658 ಪ್ರಕರಣಗಳನ್ನು ಭೇದಿಸಲಾಗಿದ್ದು, 115 ಅತ್ಯಾಚಾರ, 446 ಲೈಂಗಿಕ ದೌರ್ಜನ್ಯ, 25 ವರದಕ್ಷಿಣೆ ಕಿರುಕುಳ  ಮತ್ತು ವಿವಿಧ ಅಪರಾಧ ಪ್ರಕರಣಗಳಲ್ಲಿ 420 ಮಹಿಳೆಯರ ಸಾವು ಆಗಿದ್ದವು ಎಂದು ಮಾಹಿತಿ ನೀಡದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd