Deepaavali
ಇಂದು ಇಡೀ ವಿಶ್ವಾದ್ಯಂತ ದೀಪಗಳ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗ್ತಿದೆ. ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಇತ್ತ ರಾಜಕೀಯ ಮುಖಂಡರು ಜನರಿಗೆ ವಿಶೇಷವಾಗಿ ದೀಪಾವಳಿ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.
ಬಿಎಸ್ ಯಡಿಯೂರಪ್ಪನವರು, ಮುಖ್ಯಮಂತ್ರಿಗಳು
‘ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ದೀಪಾವಳಿ (Deepaavali) ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ. ರಾಜ್ಯವನ್ನು ಕಾಡುತ್ತಿರುವ ಕರೋನಾ ಸಾಂಕ್ರಾಮಿಕದಿಂದ ಮುಕ್ತಿ ದೊರೆತು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ. ಪರಿಸರ ಸ್ನೇಹಿಯಾಗಿ, ಸುರಕ್ಷಿತವಾಗಿ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸೋಣ. ಸರ್ವರಿಗೂ ದೀಪಾವಳಿಯ ಶುಭಾಶಯಗಳು’ ಎಂದು ದೀಪಗಳ ಹಬ್ಬಕ್ಕೆ ರಾಜ್ಯದ ಜನರಿಗೆ ಶುಭಹಾರೈಸಿದ್ದಾರೆ. 
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
‘ದೀಪಾವಳಿಯ ದೀಪದ ಸಾಲುಗಳು ನನ್ನ ಜನರ ಬದುಕಲ್ಲಿ ಸುಖ,ಶಾಂತಿ, ನೆಮ್ಮದಿ, ಆರೋಗ್ಯದ ಬೆಳಕು ಪಸರಿಸಲಿ. ದೀಪಾವಳಿಯ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ , ಮಾಜಿ ಸಿಎಂ
ಕೋರೋನಾ ಅಂಧಕಾರ ತೊಲಗಲಿ.. ಎಲ್ಲರ ಮನೆ ಮನದಲ್ಲಿ ನಂದಾದೀಪ ಬೆಳಗಲಿ. ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಸುಖ-ಸಮೃದ್ಧಿ ತರಲಿ.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು
‘ನಿಮಗೆ ಹಾಗು ನಿಮ್ಮ ಕುಟುಂಬದವರಿಗೇಲ್ಲರಿಗೂ ಬೆಳಕಿನ ಹಬ್ಬ- ದೀಪಾವಳಿಯ ಹಾರ್ದಿಕ ಶುಭಾಶಯಗಳು ದೀಪಾವಳಿಯು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ – ಮನದ ಕತ್ತಲು ಕಳೆದು ಬೆಳಕು ಬೆಳಗಲಿ, ಜ್ಞಾನದ ಬೆಳಕು ಮನಸನು ಬೆಳಗಲಿ, ಹಣತೆಯ ಬೆಳಕು ಮನೆಯನು ಬೆಳಗಲಿ. ದೀಪಾವಳಿಯನ್ನು ಸಂಭ್ರಮದಿಂದ, ಸುರಕ್ಷತೆಯಿಂದ ಆಚರಿಸೋಣ’ ಎಂದಿದ್ದಾರೆ.
ಬಿ ಶ್ರೀರಾಮುಲು , ಸಚಿವ
‘ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಕೊರೊನ ಸೋಂಕಿನ ಕುರಿತು ಸೂಕ್ತ ಜಾಗ್ರತೆ ವಹಿಸಿಸೋಣ, ಪರಿಸರಸ್ನೇಹಿ ಹಬ್ಬ ಆಚರಿಸೋಣ’ ಎಂದಿದ್ದಾರೆ.
ಉಮೇಶ್ ಜಾಧವ್, ಸಂಸದ
‘ಈ ದೀಪಾವಳಿ ಎಲ್ಲರ ಬದುಕಿನ ಕತ್ತಲೆ ಕಳೆದು ಸಂತೋಷ – ಆರೋಗ್ಯ- ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು’ ಎಂದು ಶುಭಹಾರೈಸಿದ್ದಾರೆ.
ಡಾ. ಕೆ. ಸುಧಾಕರ್, ಆರೋಗ್ಯ ಸಚಿವರು
‘ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ| ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪಂ ಪ್ರಜ್ಯಾಲಯಾಮ್ಯಾಹಂ|| ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಲಿ. ಹಬ್ಬದ ಸಂಭ್ರಮವಿರಲಿ, ಕೊರೊನಾ ವಿರುದ್ಧದ ಹೋರಾಟ ನೆನಪಿರಲಿ’ ಎಂದಿದ್ದಾರೆ.
Deepaavali
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








