Deepak Hooda | ಕೊಹ್ಲಿ ಕೈಯಿಂದ ಕ್ಯಾಪ್ ಪಡೆಯೋದು ನನ್ನ ಕನಸ್ಸು deepak-hooda share his childhood dream
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ ದೀಪಕ್ ಹೂಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹೂಡಾ, ವಿರಾಟ್ ಕೊಹ್ಲಿಯಿಂದ ಟೀಂ ಇಂಡಿಯಾದ ಕ್ಯಾಪ್ ಪಡೆದಿದ್ದು ಖುಷಿ ತಂದಿದೆ. ಅವರಿಗೆ ಕ್ಯಾಪ್ ಪಡೆಯೋದು ನನ್ನ ಚಿಕ್ಕಂದಿನ ಕನಸು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾನು ನನ್ನ ಭಾರತ ಪರ ಪಾದಾರ್ಪಣೆ ಮಾಡಿದ್ದೇನೆ. ಇದು ನನಗೆ ಅದ್ಭುತವಾದ ಭಾವನೆಯಾಗಿದೆ.
ನನ್ನ ಶಕ್ತಿ ಮೀರಿ ತಂಡಕ್ಕಾಗಿ ದುಡಿಯುತ್ತೇನೆ. ಪಂದ್ಯಕ್ಕೂ ಮುನ್ನ ಇದೇ ವಿಷಯವನ್ನು ಸೂರ್ಯಕುಮಾರ್ ಯಾದವ್ ಅವರಿಗೂ ಹೇಳಿದ್ದೆ ಎಂದಿದ್ದಾರೆ ಹೂಡಾ.
ಭಾರತ ಪರ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ತಂಡದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ.
ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆಯುವುದು ನನ್ನ ಬಾಲ್ಯದ ಕನಸಾಗಿತ್ತು.
ಈ ಪಂದ್ಯದಲ್ಲಿ ಕೊಹ್ಲಿಯಿಂದ ಕ್ಯಾಪ್ ಸ್ವೀಕರಿಸಿದ್ದು ಸಿಹಿ ಅನುಭವ ನೀಡಿದೆ. ನನ್ನ ಕನಸ್ಸು ಈಗ ಈಡೇರಿದೆ.
ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಗೌರವವಾಗಿ ಭಾವಿಸುತ್ತೇನೆ. ಈ ಅದ್ಭುತ ಪಯಣದಲ್ಲಿ ನನ್ನನ್ನು ಮುನ್ನಡೆಸಿದ ಎಲ್ಲರಿಗೂ ಧನ್ಯವಾದಗಳು ಎಂದು ದೀಪಕ್ ಹೂಡಾ ಟ್ವೀಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ನಲ್ಲಿ ದೀಪಕ್ ಹೂಡಾ ಅಜೇಯ 26 ರನ್ ಗಳಿಸಿದ್ದರು. ಅದೇ ರೀತಿ ಎರಡನೇ ಏಕದಿನ ಪಂದ್ಯದಲ್ಲಿ ಹೂಡಾ 29 ರನ್ ಗಳಿಸಿ ಮಿಂಚಿದ್ದರು.









