Deepavali
ಇಂದು ದೇಶದ್ಯಾಂತ ಅಷ್ಟೇ ವಿದೇಶಗಳಲ್ಲಿಯೂ ದೀಪಗಳ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮ ಸಡಗರ , ಶ್ರದ್ಧೆ ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ಬಹಳವೇ ಮಹತ್ವವಿದೆ. ಪ್ರತಿ ಮನೆ ಮನೆಗಳ ಆವರಣವೂ ದೀಪಗಳಿಂದ ಅಲಂಕೃತಗೊಂಡಿರುತ್ತೆ. ಎಲ್ಲಿ ನೋಡಿದ್ರು ಹಬ್ಬದ ಸಂಭ್ರಮ ಕಳೆಗಟ್ಟಿರುತ್ತೆ. ಇಂತಹ ದೀಪಾವಳಿಯ ವೈಶಿಷ್ಠ್ಯತೆ, ಆಚಾರ, ವಿಚಾರ, ಹಬ್ಬದ ಇತಿಹಾಸ, ಭಿನ್ನ ವಿಭಿನ್ನ ನಂಬಿಕೆಗಳು, ಪೌರಾಣಿಕ , ಧಾರ್ಮಿಕ ನಂಬಿಕೆಗಳು ಹೀಗೆ ದಿವಾಳಿಯ ಅನೇಕ ವಿಚಾರಗಳು ಇಲ್ಲಿವೆ ನೋಡಿ.
ಅಂದ್ಹಾಗೆ ಸಾಮಾನ್ಯವಾಗಿ ಮೂರು ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕೆ ಒಂದೊಂದು ದಿನವೂ ಒಂದೊಂದು ವಿಶೇಷತೆ ಅದರದ್ದೇ ಆದ ನಂಬಿಕೆಗಳಿವೆ. ಕೆಲವರು ಆ ಹಬ್ಬವನ್ನ ಶ್ರೀರಾಮ ರಾವಣನನ್ನ ಸೋಲಿಸಿ ಸೀತಾ ಲಕ್ಷ್ಮಣರ ಜೊತೆಗೆ ಅಯೋಧ್ಯಗೆ ಮರಳಿದ ಪ್ರತೀಕವಾಗಿ ಆಚರಣೆ ಮಾಡ್ತಾರೆ. ಇನ್ನೂ ಹಲವರು ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ಕಾರಣಕ್ಕೆ ಆಚರಣೆ ಮಾಡ್ತಾರೆ. ಹೀಗಾಗಿಯೇ ಈ ದಿನ ಅಂದ್ರೆ ದೀಪಾವಳಿ ಹಬ್ಬದ ಮೊದಲನೇ ದಿನವನ್ನು ನರಕ ಚತುರ್ದಶಿ ಎಂದು ಆಚರಣೆ ಮಾಡ್ತಾರೆ.
ಮೊದಲನೇ ದಿನ ಅಮಾವಾಸ್ಯೆಯಾಗಿದ್ದು, 2ನೇ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತೆ. ಇನ್ನೂ ಇದಕ್ಕೂ ನಾನಾ ಕಾರಣಗಳಿವೆ. ಬಲಿ ವಾಮರನ ತ್ಯಾಗವನ್ನ ಬಲಿಪಾಡ್ಯಮಿಯಾಗಿ ಆಚರಿಸಸುವ ಕಥೆಯೂ ಹಲವು ಪೌರಾಣಿಕ ನಂಬಿಕೆಗಳಲ್ಲಿ ಒಂದು. ಇನ್ನೂ ಕಡೆಯ ದಿನವನ್ನ ವಿಜಯದ ಸಂಕೇತ , ಗೆಲುವಿನ ಪ್ರತೀಕ, ಅಧರ್ಮದ ವಿರುದ್ಧ ಧರ್ಮದ ಜಯ ಎಂಬ ಮನೋಭಾವದೊಂದಿಗೆ ಅದ್ಧೂರಿಯಾಗಿ ದೀಪಗಳ ಹಬ್ಬವನ್ನ ಆಚರಿಸಲಾಗುತ್ತೆ. ಹೀಗೆ ದೀಪಾವಳಿ ನಾನಾ ಕಥೆಗಳು, ವಿಶಿಷ್ಠತೆ, ಇತಿಹಾಸವನ್ನ ಹೊಂದಿದೆ. ಈ ಹಬ್ಬದ ಮೂರೂ ದಿನಗಳ ಕಾಲ ಚಿಕ್ಕ ಮಕ್ಕಳಿಂದ ದೊಡ್ಡವರ ತನಕವೂ ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡ್ತಾರೆ.
ದೇಶದಲ್ಲಿಯೇ ನಾನಾ ಬಾಗದ ಜನರು ನಾನಾ ರೀತಿಗಳಲ್ಲಿ ದೀಪಾವಳಿ ಆಚರಣೆ ಮಾಡ್ತಾರೆ. ದಕ್ಷಿಣ ಬಾರತದ ಜನರು 3 ದಿನಗಳ ಕಾಲ ಆಚರಣೆ ಮಾಡಿದ್ರೆ, ಉತ್ತರ ಭಾರತದಲ್ಲಿ 5 ದಿನ ಆಚರಿಸುತ್ತಾರೆ. ದಕ್ಷಿಣ ಬಾರತೀಯರಿಗೆ ನರಕ ಚತುರ್ದಶಿ ಮುಖ್ಯವಾದ್ರೆ, ಉತ್ತರ ಭಾರತದವರು ಲಕ್ಷ್ಮೀ ಪೂಜೆ ಅಂದ್ರೆ ಅಮಾವಾಸ್ಯೆಯಂದೇ ವಿಜೃಂಭಣೆಯಿಂದ ಆಚರಿಸುತ್ತಾರೆ.
ಇನ್ನೂ ಈ ಹಬ್ಬವನ್ನ ಕೇವಲ ಹಿಂದುಗಳಷ್ಟೇ ಅಲ್ಲ ನಾನಾ ಧರ್ಮದವರು, ನಾನಾ ದೇಶಗಳಲ್ಲೂ ಅಷ್ಟೇ ಸಡಗರದಿಂದ ವಿಜೃಂಭಣೆಯಾಗಿ ಆಚರಣೆ ಮಾಡ್ತಾರೆ. ಸಿಖ್ ಧರ್ಮದಲ್ಲಿಯೂ ದೀಪಾವಳಿ ಹಬ್ಬ ಪ್ರಮುಖವಾಗಿದೆ. ಸಿಖ್ ರು ಈ ಹಬ್ಬವನ್ನ ಹಹರಗೋಬಿಂದ್ ಸಿಂಗ್ ಗ್ವಾಲಿಯರ್ ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನ ಬಿಡಿಸಿ ತಂದ ದಿನವೆಂದು ಆಚರಿಸುತ್ತೆ. ಜೈನ ಧರ್ಮದಲ್ಲಿ ಕಾರ್ತಿಕ ಮಾಸದ 3ದಿನ ದೀಪಾವಳಿ ಆಚರಣೆ ಮಾಡ್ತಾರೆ. ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ್ದ ದಿವಾಗಿ ಈ ಹಬ್ಬವನ್ನ ಆಚರಿಸುತ್ತಾರೆ. ಹಿಂದುಗಳಿಗೆ ಯುಗಾದಿ ಹೊಸ ವರ್ಷದ ಪ್ರಾರಂಭವಾದರೆ ಜೈನರಿಗೆದೀಪಾವಳಿಯೇ ಹೊಸ ವರ್ಷದ ಪ್ರಾರಂಭ.
Deepavali
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








