ನಟ ಪ್ರಭಾಸ್ ಕಂಡು ನರ್ವಸ್ ಆಗಿದ್ರಂತೆ ಬಾಲಿವುಡ್ ನ ಈ ಸ್ಟಾರ್ ನಟಿ..!
ಬಾಹುಬಲಿ ಸಿನಿಮಾ ಮೂಲಕ ಭಾರತದ ಬಿಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಪ್ರಭಾಸ್ ಈಗ ಸಂಭಾವನೆ ಇರಬಹುದು , ಸಿನಿಮಾ ಬೇಡಿಕೆ ಇರಬಹುದು , ಟಾಪ್ ನಟನ ಸ್ಥಾನದಲ್ಲೇ ಇರಬಹುದು , ಬಾಲಿವುಡ್ ನ ದೊಡ್ಡ ದೊಡ್ಡ ಕಲಿಗಳನ್ನ ಹಿಂದಿಟ್ಟಿದ್ದಾರೆ.. ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪ್ರಭಾಸ್ ಅವರ ವರ್ಚಸ್ಸು ಎಲ್ರಿಗೂ ಗೊತ್ತಿದೆ..
ಈ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ನಟಿ ದೀಪಿಕಾ ಪಡುಕೋಣೆಯವರು ಬಾಹುಬಲಿ ಪ್ರಭಾಸ್ ರನ್ನ ನೋಡಿ ಹೆದರಿದ್ದರಂತೆ.. ಹೌದು ದೀಪಿಕಾ ಹಾಗೂ ಪ್ರಭಾಸ್ ಹೊಸ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರುವ ವಿಚಾರ ಗೊತ್ತೇ ಇದೆ..
ಸದ್ಯ ಈ ಚಿತ್ರದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಸಂದರ್ಶನ ಒಂದ್ರಲ್ಲಿ ಮಾತಾಡಿದ್ದಾರೆ. ಈ ವೇಳೆ ದೀಪಿಕಾ ಪಡುಕೋಣೆ ಚಿತ್ರದ ನಿರ್ದೇಶಕ ಅಶ್ವಿನ್ ನಾಗ್ ಮತ್ತು ನಟ ಪ್ರಭಾಸ್ ಬಗ್ಗೆ ದೀಪಿಕಾ ಮಾತನಾಡಿದ್ದಾರೆ. ಇದೇ ವೇಳೆ ದೀಪಿಕಾ ಪ್ರಭಾಸ್ ಅವರನ್ನು ನೋಡಿ ಹೆದರಿದ್ದೆ ಎಂದಿದ್ದಾರೆ ದೀಪಿಕಾ.
ನಾನು ನಿಜವಾಗಿಯೂ ತುಂಬಾನೇ ನರ್ವಸ್ ಆಗಿದ್ದೇನೆ. ನಾನು ಮೊದಲ ಬಾರಿಗೆ ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು. ಕ್ಯಾಮೆರಾ ಮುಂದೆ ಸ್ವಲ್ಪ ಸಮಯ ಕಳೆದ ನಂತರ ನಾನು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬಹುದು ಎಂದು ಹೇಳಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಪ್ರಾಜೆಕ್ಟ್ ಕೆ’ ಸಿನಿಮಾಗೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳ್ತಿದ್ದಾರೆ.. ಈ ಚಿತ್ರದ ಶೂಟಿಂಗ್ ಡಿಸೆಂಬರ್ 7 ರಿಂದಲೇ ಹೈದರಾಬಾದಿನಲ್ಲಿ ಆರಂಭ ಆಗಿದೆ ಎನ್ನಲಾಗಿದೆ.. ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
‘ಪ್ರಾಜೆಕ್ಟ್ ಕೆ’ ಚಿತ್ರ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುಮಾರು 400 ರಿಂದ 500 ಕೋಟಿ ವೆಚ್ಚದ್ದಲ್ಲಿ ಮೂಡಿಬರಲಿದೆ ಎನ್ನಲಾಗಿದೆ..








