ಪಠಾಣ್ ನಲ್ಲಿ ಗನ್ ಹಿಡಿದು ಹಾರ್ಟ್ ಬೀಟ್ ಹೆಚ್ಚಿಸಿದ ದೀಪಿಕಾ ಪಡುಕೋಣೆ…
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅನೇಕರ ಫೇವರೇಟ್ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್, ಚೆನೈ ಎಕ್ಸ್ಪ್ರೆಸ್ ಚಿತ್ರಗಳಲ್ಲಿ ಈ ಜೋಡಿ ಕಮಾಲ್ ಮಾಡಿತ್ತು. ಅನೇಕ ವರ್ಷಗಳ ನಂತರ ಈ ಜೋಡಿ ಮತ್ತೆ ಪಠಾಣ್ ಸಿನಿಮಾಗೆ ಒಂದಾಗಿದ್ದಾರೆ.. ಈ ಸಿನಿಮಾ ಮೂಲಕ ಶಾರುಖ್ ಖಾನ್ ಸುಮಾರು 4- 5 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.. ಹೀಗಾಗಿ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ..
https://www.instagram.com/reel/CgbNT1UPeuC/?utm_source=ig_embed&ig_rid=e77a6c57-acde-4f0f-a1d8-be304e92a8a7
ಅಂದ್ಹಾಗೆ ಇದೀಗ ದೀಪಿಕಾ ಪಡುಕೋಣೆಯ ಲುಕ್ ರಿಲೀಸ್ ಆಗಿದ್ದು , ಸಖತ್ ರೆಬೆಲ್ ಆಗಿ ಗನ್ ಹಿಡಿದು ದೀಪಿಕಾ ಕಾಣಿಸಿಕೊಂಡು ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಾಗುವಂತೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಈ ಚಿತ್ರವನ್ನ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ನಿರ್ದೇಶನದ, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ0 ಪಠಾಣ್ ಚಿತ್ರದಲ್ಲಿ ಗನ್ ಹಿಡಿದು ದೀಪಿಕಾ ಮಿಂಚಿದ್ದಾರೆ. ಅವರ ಈ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು ಈ ಫೋಠೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.








