ಸ್ನೇಹಿತ ಶಿಂಜೋ ಅಬೆ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ – ಪ್ರಧಾನಿ ಮೋದಿ..
ಜಪಾನ್ ನ ನಾರಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಮಾಡಡುತ್ತಿದ್ದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅವರನ್ನ ನಾರಾ ನಗರದ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸೇರಿಸಲಾಗಿದೆ.
ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಭಾರತದೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಶೇಷ ಸ್ನೇಹವನ್ನ ಹೊಂದಿದ್ದರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಜಪಾನ್ ಪ್ರಧಾನಿಯೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಭಾರತ ಸರ್ಕಾರವು 2021 ರಲ್ಲಿ ಶಿಂಜೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪದ್ಮವಿಭೂಷಣ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ..
ಸದ್ಯ ಶಿಂಜೊ ಅಬೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಜಪಾನ್ ಸಂಕಟ ಅನುಭವಿಸುತ್ತಿದೆ. ಭಾರತೀಯರು ಕೂಡ ಶಿಂಜೋ ಅಬೆ ಅವರಿಗಾಗಿ ಕಂಬನಿ ಮಿಡಿದಿದ್ದಾರೆ. ಕಾರಣ ಶಿಂಜೋ ಅಬೆ ಅವರ ಭಾರತದ ಮೇಲಿನ ಪ್ರೀತಿ. ಭಾರತ-ಜಪಾನ್ ಸಂಬಂಧವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದ ಏಕೈಕ ಜಪಾನ್ ವ್ಯಕ್ತಿ ಶಿಂಜೋ ಅಬೆ. ಪ್ರಧಾನಿ ಮೋದಿಯವರೊಂದಿಗಿನ ಶಿಂಜೋ ಅಬೆ ಸ್ನೇಹದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಶಿಂಜೋ ಅಬೆ ಅವರು ಪ್ರಧಾನಿ ಮೋದಿಯನ್ನು ತಮ್ಮ ಸ್ನೇಹಿತ ಎಂದು ಕರೆಯುತ್ತಿದ್ದರು. ಪಿಎಂ ಮೋದಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಶಿಂಜೋ ಅಬೆ ಅವರನ್ನು ಗೌರವಿಸಿದ್ದರು.
ಶಿಂಜೋ ಅಬೆ ಮತ್ತು ಪ್ರಧಾನಿ ಮೋದಿ ಸ್ನೇಹ
ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗದ ಕಾಲದಿಂದಲೂ ಶಿಂಜೋ ಅಬೆ ಮತ್ತು ನರೇಂದ್ರ ಮೋದಿ ಸ್ನೇಹಿತರು. 2007 ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಿಂಜೋ ಅಬೆ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಇದಾದ ನಂತರ ಈ ಇಬ್ಬರು ನಾಯಕರು 2012ರಲ್ಲಿ ಭೇಟಿಯಾದರು. 26 ಜನವರಿ 2014 ರಂದು, ಶಿಂಜೋ ಅಬೆ ಗಣರಾಜ್ಯೋತ್ಸವದಂದು ವಿಶೇಷ ಅತಿಥಿಯಾಗಿ ಬಂದಿದ್ದರು.
ಶಿಂಝೋ ಅಬೆ ಮೇಲಿನ ದಾಳಿ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿ ದುಖಃ ತೋಡಿಕೊಂಡಿದ್ದಾರೆ. ನನ್ನ ಆತ್ಮೀಯ ಸ್ನೇಹಿತ ಅಬೆ ಶಿಂಜೋ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರೊಂದಿಗೆ ಅವರ ಕುಟುಂಬದೊಂದಿಗೆ ಮತ್ತು ಜಪಾನ್ ಜನರೊಂದಿಗೆ ಇವೆ ಎಂದು ಟ್ವೀಟ್ ಮಾಡಿದ್ದಾರೆ.
Deeply distressed by the attack on my dear friend Abe Shinzo. Our thoughts and prayers are with him, his family, and the people of Japan.
— Narendra Modi (@narendramodi) July 8, 2022