ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಗ್ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಚಿತ್ರೀಕರಣವಾಗುತ್ತಿದ್ದು ಯಾರು ಮನೆ ಪ್ರವೇಶ ಮಾಡಬಹುದು ಎಂಬ ಚರ್ಚೆಗಳು ಶುರುವಾಗಿವೆ.
10ನೇ ಸೀಸನ್ ಆಗಿರುವುದರಿಂದ ಸಂಥಿಂಗ್ ಸ್ಪೆಷಲ್ ಎಂದು ಕಲರ್ಸ್ ಕನ್ನಡ ಹೇಳಿದೆ. ಈಗಾಗಲೇ ಸೆಟ್ ಕೂಡ ಹಾಕಲಾಗಿದೆ. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಬೃಹತ್ ಮನೆ ನಿರ್ಮಿಸಲಾಗಿದೆ
3ನೇ ಬಾರಿಗೆ ಬಿಗ್ಬಾಸ್ ಮನೆಯ ಸ್ಥಳವನ್ನು ಬದಲಿಸಲಾಗಿದೆ. ಈಗಾಗಲೇ ಹಲವರ ಹೆಸರುಗಳು ಕೂಡ ಲೀಕ್ ಆಗಿದ್ದು, ಯಾರು ಮನೆ ಪ್ರವೇಶ ಮಾಡಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಶ್ವಾನ ಚಾರ್ಲಿ ಬಿಗ್ಬಾಸ್ ಮನೆಗೆ ಹೋಗುವ ಸುದ್ದಿ ಕೆಲ ದಿನಗಳ ಹಿಂದೆಯೇ ರಿವೀಲ್ ಆಗಿತ್ತು. ಉರಗ ಸಂರಕ್ಷಕ ಸ್ನೇಕ್ ಶ್ಯಾಮ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಬಹುದು ಎನ್ನಲಾಗುತ್ತಿದೆ.
ಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ಹರ ಹರ ಮಹಾದೇವ್’ ಧಾರಾವಾಹಿ ನಟ ವಿಜಯ್ ಗೌಡ, ಮಂಗಳಮುಖಿ ನೀತು ವನಜಾಕ್ಷಿ, ಹಾಸ್ಯ ನಟ ಕೋಮಲ್, ನಿರೂಪಕ ಗೌರೀಶ್ ಅಕ್ಕಿ, ಬಿಗ್ಬಾಸ್ ಮಿನಿ ಸೀಸನ್ ಸ್ಪರ್ಧಿ ತ್ರಿವಿಕ್ರಮ್, ರ್ಯಾಪರ್ ಎಶಾನಿ ಸೇರಿದಂತೆ ಕೆಲವರು ಬಿಗ್ಬಾಸ್ ಮನೆಗೆ ಹೋಗಬಹುದು ಎನ್ನಲಾಗುತ್ತಿದೆ. ಆದರೆ, ಯಾವುದು ಅಧಿಕೃತವಾಗಿ ಹೊರ ಬಂದಿಲ್ಲ.
ಅಕ್ಟೋಬರ್ ರಂದು ಸಂಜೆ 6ಕ್ಕೆ ಬಿಗ್ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್ ಆರಂಭವಾಗಲಿದೆ. ಆ ಬಳಿಕ ಸ್ಪರ್ಧಿಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. 100 ದಿನಗಳ ಕಾಲ ಸ್ಪರ್ಧಿಗಳು ಬಿಗ್ಬಾಸ್ ಮನೆಯೊಳಗೆ ಇರುತ್ತಾರೆ.