ಇಂದಿನಿಂದ 1 ವಾರ ರಾಷ್ಟ್ರ ರಾಜಧಾನಿ ಬಂದ್ – 6 ದಿನ ಲಾಕ್ ಡೌನ್..!
ನವದೆಹಲಿ : ದೇಶಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಜೋರಾಗಿದೆ. ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ 2ನೇ ಅಲೆ ವೇಳೆ ಹೆಚ್ಚಾಗಿದ್ದು, ಅನೇಕ ರಾಜ್ಯಗಳಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ವಾರ ಅಂದ್ರೆ 6 ದಿನಗಳ ಕಾಲ ಲಾಕ್ ಡೌಣ್ ಘೋಷಣೆ ಮಾಡಿದೆ ಅಲ್ಲಿನ ಸರ್ಕಾರ..
ಇಂದಿನಿಂದ ಮುಂದಿನ ಸೋಮವಾರದ ಬೆಳಗ್ಗೆಯವರೆಗೂ ದೆಹಲಿಯನ್ನು ಸಂಪೂರ್ಣ ಲಾಕ್ಡೌನ್ಮಾಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ರೊಂದಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ಸಭೆ ನಡೆಸಿದ ಬಳಿಕ ದೆಹಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ರಾತ್ರಿ 10 ಗಂಟೆಯಿಂದ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್ಡೌನ್ ಮಾಡಲಾಗುವುದು ಎಂದು ಘೋಷಿಸಿದರು. ಅಗತ್ಯ ಸೇವೆಗಳು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಈ ಲಾಕ್ಡೌನ್ ಅವಧಿಯಲ್ಲಿ ಬಂದ್ ಆಗಿರಲಿದೆ ಎಂದು ಅವರು ತಿಳಿಸಿದರು.
ಮಡಿಕೇರಿ | ಥಿಯೇಟರ್ ಗಳತ್ತ ಮುಖ ಮಾಡದ ಪ್ರೇಕ್ಷಕರು