ಟ್ರ್ಯಾಕ್ಟರ್ ಪರೇಡ್ ಗಲಭೆ: ಹಿಂಸಾಚಾರದ ವಿಡೀಯೋ, ಫೋಟೋಸ್ ಕಳುಹಿಸಿ : ಪೊಲೀಸರ ಮನವಿ..!
ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ 300ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದರು. ಗಣರಾಜ್ಯೋತ್ಸವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಎಫ್ ಐಆರ್ ಗಳನ್ನು ದಾಖಲಿಸಿದ್ದಾರೆ. ಈ ಗಲಭೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರಸಹ ರಣಾಂಗಣವಾವಗಿ ಮಾರ್ಪಾಡಾಗಿತ್ತು. ಇದೀಗ ಪ್ರಕರಣ ನಡೆದ 3 ದಿನಗಳ ನಂತರ, ಹಿಂಸಾಚಾರದ ಸಾಕ್ಷಿಯಾದ ಜನರು ಪೊಲೀಸರೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ ಖಾಲಿ ಮಾಡಲು ರೋಗಿಗಳನ್ನೇ ಬಲಿಪಡೆದ ರಾಕ್ಷಸ – ವೈದ್ಯ.!
ಜ.26ರಂದು ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿ, ದೆಹಲಿಯಲ್ಲಿ ಹಿಂಸಾಚಾರ ನಡೆಸಿದ್ದರು. ಘಟನೆಗಳಿಗೆ ಸಾಕ್ಷಿಯಾಗಿರುವ ಅಥವಾ ಘಟನೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿರುವ ಅಥವಾ ಅವರ ಮೊಬೈಲ್ ಫೋನ್ ಅಥವಾ ಕ್ಯಾಮೆರಾದಲ್ಲಿ ಯಾವುದೇ ಚಟುವಟಿಕೆಯನ್ನು ಸೆರೆ ಹಿಡಿದಿದ್ದರೆ, ಅವರ ಹೇಳಿಕೆ/ಫೂಟೇಜ್/ಚಿತ್ರವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ವಸ್ತುಗಳನ್ನು ಕೊಠಡಿ ಸಂಖ್ಯೆ 215, ಎರಡನೇ ಮಹಡಿ, ಹಳೆ ದೆಹಲಿ ಪೊಲೀಸ್ ಪ್ರಧಾನ ಕಚೇರಿ, ಐ.ಟಿ.ಓ. ಇದಕ್ಕೆ ಕಳುಹಿಸಿಕೊಡಬೇಕಾಗಿ ತಿಳಿಸಿದ್ದಾರೆ. ಜನವರಿ 26ರ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೊಬೈಲ್ ಸಂಖ್ಯೆ, ಲ್ಯಾಂಡ್ ಲೈನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪೊಲೀಸರು ನೀಡಿದ್ದಾರೆ. ಸಾಕ್ಷಿಯ ಗುರುತುಗಳನ್ನು ರಹಸ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರ ಹೋರಾಟಕ್ಕೆ ಮಣಿದ ಸರ್ಕಾರ: ಖಾಸಗಿ ಶಾಲೆಗಳಲ್ಲಿ ಶೇ.30ರಷ್ಟು ಶುಲ್ಕ ಕಡಿತಕ್ಕೆ ನಿರ್ಧಾರ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel