ಮಣಿದಯ ಅನ್ನದಾತ : ಕೃಷಿ ಮಸೂದೆಗೆ ಯಾಕಿಷ್ಟು ವಿರೋಧ?
ನವದೆಹಲಿ : ಕೊರೆಯುವ ಚಳಿಯ ನಡುವೆಯೇ ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ನಾಲ್ಕು ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿಯ ಸಿಂಗೂ ಬಾರ್ಡರ್ನಲ್ಲಿ ದೊಡ್ಡಪ್ರಮಾಣದಲ್ಲಿ ಅಂದರೆ ಕನಿಷ್ಠ 60-80 ಸಾವಿರ ಜನರು ಟ್ರಾಕ್ಟರ್ಗಳ ಮೂಲಕ ಜಮಾಯಿಸಿದ್ದಾರೆ. ಅದೂ ಯಾವ ಪ್ರಮಾಣದಲ್ಲಿ ಅಂದರೆ ಸುಮಾರು ಆರು ಕಿ.ಮೀ ತನಕ ಟ್ರಾಕ್ಟರ್ಗಳು..! ಕನಿಷ್ಠವೆಂದರೂ ಐದು ಸಾವಿರಕ್ಕೂ ಹೆಚ್ವು ಟ್ರಾಕ್ಟರ್ಗಳು ರಸ್ತೆಯ ಎರಡು ಬದಿಗಳಲ್ಲೂ ನಿಂತಿವೆ.
ಅಲ್ಲೆ ರೈತರು ಒಂದೊಂದು ಕಡೆ ಪ್ರತಿಭಟನೆ, ಧರಣಿ, ಮಾತುಕತೆ, ಹೋರಾಟದ ಹಾಡುಗಳು, ಈ ಮೂರು ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ರೈಲ್ವೆ ನೌಕರರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ
ರೈತರು ದೆಹಲಿಯ ಬುರಾಡಿ ಮೈದಾನಕ್ಕೆ ಬಂದರೆ ಅವರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
‘ಗೃಹ ಸಚಿವ ಅಮಿತ್ ಶಾ ಅವರು ವಿಧಿಸಿರುವ ಷರತ್ತು ನಮಗೆ ಒಪ್ಪಿತವಾಗಿಲ್ಲ. ನಾವು ಯಾವುದೇ ಷರತ್ತುಬದ್ಧ ಮಾತುಕತೆಗಳನ್ನು ನಡೆಸುವುದಿಲ್ಲ. ಸರ್ಕಾರದ ಪ್ರಸ್ತಾಪವನ್ನು ನಾವು ತಿರಸ್ಕರಿಸುತ್ತೇವೆ ಎಂದು ರೈತ ನಾಯಕರು ಹೇಳಿದ್ದಾರೆ.
ಅಲ್ಲದೆ ದೆಹಲಿ ಪ್ರವೇಶಿಸುವ ಎಲ್ಲಾ ಐದು ಐದು ಮಾರ್ಗಗಳನ್ನು ನಾವು ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಕೋವಿಡ್ ಲಸಿಕೆಯ ತುರ್ತು ಬಳಕೆಗಾಗಿ ಮುಂದಿನ ಎರಡು ವಾರಗಳಲ್ಲಿ ಅರ್ಜಿ ಸಲ್ಲಿಕೆ – ಆದರ್ ಪೂನವಾಲ್ಲಾ
ಹಾಗೆ ಮಾತುಕತೆಗೆ ಹಾಕಲಾದ ಷರತ್ತು ರೈತರಿಗೆ ಮಾಡಿದ ಅವಮಾನ. ನಾವು ಎಂದಿಗೂ ಬುರಾಡಿಗೆ ಹೋಗುವುದಿಲ್ಲ. ಅದು ಉದ್ಯಾನವನವಲ್ಲ ‘ತೆರೆದ ಜೈಲು” ಎಂದು ರೈತರು ದೂರಿದ್ದಾರೆ.
ಹಾಗಾದ್ರೆ ಕೇಂದ್ರದ ಕೃಷಿ ಮಸೂದೆಗಳಿಗೆ ವಿರೋಧ ಯಾಕೆ..?
ಮೊದಲನೆಯದಾಗಿ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಪ್ರಚಾರ ಹಾಗೂ ಸೌಲಭ್ಯ ಮಸೂದೆ 2020 : ಈ ಮಸೂದೆ ಪ್ರಕಾರ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು.
ಇದರಲ್ಲಿ ತಪ್ಪೇನಿದೆ.. ಇದು ಈಗಾಗಲೇ ನಡೀತಿದೆ ಅಲ್ವಾ.. ಆದರೂ ವಿರೋಧ ಯಾಕೆ ಅಂತಾ ಯೋಚ್ನೆ ಮಾಡಿದ್ರೆ..
ಈ ಮಸೂದೆ ಎಪಿಎಂಸಿ ವ್ಯವಸ್ಥೆಯನ್ನು ಹಾಳು ಮಾಡುತ್ತೆ. ಇದರಲ್ಲಿ ಎಪಿಎಂಸಿಯಲ್ಲಿ ಕೆಲಸ ಮಾಡೋರು ನಿರುದ್ಯೋಗಿಗಳಾಗುತ್ತಾರೆ ಅನ್ನೋದು ಮಸೂದೆಯನ್ನ ವಿರೋಧಿಸುತ್ತಿರುವವರ ವಾದ.
ಇನ್ನು ಎರಡನೇಯದಾಗಿ ರೈತರ ಸಬಲೀಕರಣ ಮತ್ತು ಸಂರಕ್ಷಣೆ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಮಸೂದೆ 2020 : ಈ ಮಸೂದೆ ರೈತರಿಗೆ ಸಿಗುತ್ತಿರುವ ಬೆಂಬಲ ಬೆಲೆಯನ್ನು ಕಸಿದುಕೊಳ್ಳುತ್ತೆ ಎಂಬೋದು ರೈತರ ವಾದ.
ಮೂರನೇಯದು ‘ಅಗತ್ಯ ಸರಕುಗಳು ತಿದ್ದುಪಡಿ ಮಸೂದೆ 2020’ : ಇಲ್ಲಿ ಈರುಳ್ಳಿ, ಆಲುಗಡ್ಡೆ,ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಇದರಿಂದ ವ್ಯಾಪಾರಿಗಳು ಕಾಳಸಂತೆಯನ್ನು ಸೃಷ್ಠಿ ಮಾಡ್ತಾರೆ. ಕೃತಕ ಅಭಾವವನ್ನು ನಿರ್ಮಿಸಿ ಬೆಲೆ ಏರಿಕೆ ಮಾಡ್ತಾರೆ. ಮತ್ತು ರೈತರ ಬಳಿ ಖರೀದಿ ಮಾಡುವಾಗ ಕಡಿಮೆ ಬೆಲೆಗೆ ಮಾರುವಂತೆ ಒತ್ತಾಯ ಮಾಡುತ್ತಾರೆ ಎಂಬೋದು ರೈತರ ವಾದ.
ಇನ್ನು ಸದ್ಯ ನಡೆಯುತ್ತಿರೋ ಪ್ರತಿಭಟನೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಹಾಗೂ ಖಲಿಸ್ತಾನದ ಕುಮ್ಮಕ್ಕಿದೆ ಎಂದು ಆರೋಪ ಮಾಡಲಾಗುತ್ತಿದೆ.
ಆದ್ರೆ ರೈತರ ಬಗ್ಗೆ ಮಾತಾಡುವಾಗ ನಾವು ಪಕ್ಷ, ಸಿದ್ಧಾಂತವನ್ನ ಮರೆತುಬಿಡಬೇಕು. ಇಲ್ಲಾಂದ್ರೆ ಮುಂದೆ ಮಣ್ಣು ತಿನ್ನಬೇಕಾಗುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel