ಸಿಡ್ನಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (BGT Test Series) ಕೊನೆಯ ಪಂದ್ಯದ ಮೇಲೆ ಬೌಲರ್ ಗಳು ಹಿಡಿತ ಸಾಧಿಸುತ್ತಿದ್ದರು.
2ನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ (Rishabh Pant) ಸಿಡಿಲಬ್ಬರದ ಅರ್ಧ ಶತಕ ಗಳಿಸಿದ್ದು, ಭಾರತ ತಂಡಕ್ಕೆ ದಿನಾಂತ್ಯಕ್ಕೆ 32 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ. ಈ ಮೂಲಕ ಭಾರತ ತಂಡ 145 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಮೊದಲ ದಿನದ ಅಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. 2ನೇ ದಿನದ ಆಟ ಆರಂಭಿಸಿದ ಆಸೀಸ್ 181 ರನ್ ಗಳಿಗೆ ಆಲೌಟ್ ಆಯಿತು. 4 ರನ್ ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮತ್ತೆ ಮುಗ್ಗರಿಸಿತು.
ಸಂಕಷ್ಟದಲ್ಲಿದ್ದ ಭಾರತಕ್ಕೆ ರಿಷಬ್ ಪಂತ್ ಸ್ಫೋಟಕ ಅರ್ಧಶತಕದ ಮೂಲಕ ಶಕ್ತಿ ತುಂಬಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ.
ಇನ್ನುಳಿದಂತೆ ಯಶಸ್ವಿ ಜೈಸ್ವಾಲ್ 22ರನ್, ಕೆ.ಎಲ್ ರಾಹುಲ್ ಮತ್ತು ಶುಭಮನ್ ಗಿಲ್ ತಲಾ 13 ರನ್, ವಿರಾಟ್ ಕೊಹ್ಲಿ 6 ರನ್, ನಿತೀಶ್ ರೆಡ್ಡಿ 4 ರನ್ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 8 ರನ್, ವಾಷಿಂಗ್ಟನ್ ಸುಂದರ್ ಅಜೇಯ 6 ರನ್ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ.