Dehli : ದೆಹಲಿ ಹೋಳಿ ಆಚರಣೆ ವೇಳೆ ಜಪಾನ್ ಯುವತಿಗೆ ಕಿರುಕುಳ…
ದೆಹಲಿಯಲ್ಲಿ ಹೋಳಿ ಆಚರಣೆಯ ವೇಳೆ ಜಪಾನ್ ದೇಶದ ಯುವತಿಯ ಮೇಲೆ ಹುಡುಗರ ಗುಂಪೊಂದು ಬಲವಂತವಾಗಿ ಹೋಳಿ ಎರಚಿ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಯುವತಿಯ ಗುರುತನ್ನ ಪತ್ತೆ ಹಚ್ಚಲು ಸಹಾಯ ಮಾಡುವಂತೆ ಜಪಾನ್ ರಾಯಭಾರ ಕಚೇರಿಗೆ ಪತ್ರ ಬರೆದಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ಜಪಾನ್ ಪ್ರವಾಸಿಯಾಗಿದ್ದು, ಅವರು ರಾಷ್ಟ್ರ ರಾಜಧಾನಿಯ ಪಹರ್‌ಗಂಜ್‌ನಲ್ಲಿತಂಗಿದ್ದರು ಮತ್ತು ಈಗ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿದಂತೆ ಮೂವರು ಬಾಲಕರನ್ನ ಬಂಧಿಸಲಾಗಿದೆ. ಆರೋಪಿಗಳು ಘಟನೆಯನ್ನ ಒಪ್ಪಿಕೊಂಡಿದದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಯಾವುದೇ ವಿದೇಶಿಯರೊಂದಿಗೆ ಯಾವುದೇ ರೀತಿಯ ಅನುಚಿತ ವರ್ತನೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಕರೆಯನ್ನು ಪಹರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿಲ್ಲ. ಬಾಲಕಿಯ ಗುರುತು ಅಥವಾ ಘಟನೆಯ ಕುರಿತು ಯಾವುದೇ ಇತರ ವಿವರಗಳನ್ನ ಪತ್ತೆಹಚ್ಚಲು ಸಹಾಯವನ್ನ ಕೋರುವ ಇಮೇಲ್ ಅನ್ನ ಜಪಾನ್ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
DCW, NCW ಕ್ರಮವನ್ನ ಬಯಸಿ ಟ್ವೀಟ್
ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ವಿಡಿಯೋವನ್ನು ಪರಿಶೀಲಿಸಲು ಮತ್ತು ದುಷ್ಕರ್ಮಿಗಳನ್ನು ಬಂಧಿಸಲು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿರುವುದಾಗಿ ಹೇಳಿದ್ದಾರೆ.ರಾಷ್ಟ್ರೀಯ ಮಹಿಳಾ ಆಯೋಗವೂ ಈ ವಿಡಿಯೋದ ಬಗ್ಗೆ ಗಮನ ಸೆಳೆದು ಟ್ವೀಟ್ ಮಾಡಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.
Delhi: Harassment of a young Japanese woman during Holi celebrations in Delhi…