ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ 2ನೇ ಅತ್ಯಂತ ಜನನಿಬಿಡ ನಿಲ್ದಾಣ
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ 2ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಜಾಗತಿಕ ಟ್ರಾವೆಲ್ ಡೇಟಾ ಪೂರೈಕೆದಾರರಾದ ಅಫೀಶಿಯಲ್ ಏರ್‌ಲೈನ್ ಗೈಡ್ (OAG) ಅಧ್ಯಯನ ಹೇಳಿದೆ.
ಮಾರ್ಚ್ 2022 ರಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಶ್ವದ ಎರಡನೇ ಅತ್ಯಂತ ಜನನಿಬಿಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರದಿಯಲ್ಲಿ ಹೇಳಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎರಡನೇ ಸ್ಥಾನ ಪಡೆದುಕೊಂಡಿದೆ. ದುಬೈ ಮೂರನೇ ಸ್ಥಾನದಲ್ಲಿದೆ.
ಯುನೈಟೆಡ್ ಸ್ಟೇಟ್ಸ್‌ನ ಅಟ್ಲಾಂಟಾ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೆಂದು ಶ್ರೇಯಾಂಕ ಪಡೆದಿದೆ ಮತ್ತು ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಸಾಂಕ್ರಾಮಿಕ ರೋಗಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣವು ಮಾರ್ಚ್ 2019 ರಲ್ಲಿ 23 ನೇ ಸ್ಥಾನದಲ್ಲಿತ್ತು ಮತ್ತು 2ನೇ ಸ್ಥಾನವನ್ನು ತಲುಪಲು 21 ಸ್ಥಾನಗಳನ್ನು ಜಿಗಿತ ಕಂಡಿದೆ.






