ಬೆಂಗಳೂರು, ಮೇ 14 : ಮಂಗಳವಾರ ನವದೆಹಲಿಯಿಂದ ಹೊರಟ ವಿಶೇಷ ರೈಲು ಗುರುವಾರ ಬೆಳಿಗ್ಗೆ 920 ಪ್ರಯಾಣಿಕರನ್ನು ಹೊತ್ತು ನಗರಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸರ್ವ ಸಿದ್ಧತೆ ಮಾಡಿಕೊಂಡಿದೆ.
ರೈಲು ನಿಲ್ದಾಣದಲ್ಲಿ ದೆಹಲಿಯಿಂದ ಬಂದ ಪ್ರಯಾಣಿಕರನ್ನು ಕಾಣಲು ಅವರ ಕುಟುಂಬದವರು ಜಮಾಯಿಸಿದ್ದು, ಅವರ ಭೇಟಿಗೆ ಅಧಿಕಾರಿಗಳು ಅವಕಾಶ ನೀಡಿಲ್ಲ.
ಸುಮಾರು 7.15ರ ಹೊತ್ತಿಗೆ ಬೆಂಗಳೂರು ರೈಲು ನಿಲ್ದಾಣಕ್ಕೆ ವಿಶೇಷ ರೈಲು ಆಗಮಿಸಿದ್ದು, ಎಲ್ಲಾ ಪ್ರಯಾಣಿಕರಿಗೆ ಅರ್ಜಿ ನಮೂನೆಗಳನ್ನು ನೀಡಿ ಭರ್ತಿ ಮಾಡಲು ತಿಳಿಸಲಾಗಿದೆ. ರೈಲ್ವೆ ಪೊಲೀಸರು ಮತ್ತು ಅಧಿಕಾರಿಗಳು ಏನೆಲ್ಲಾ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಬೇಕು ಎಂಬ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಬಳಿಕ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ, ಎಲ್ಲರನ್ನೂ14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ಆರೋಗ್ಯ ತಪಾಸಣೆಗಾಗಿ ಬಿಬಿಎಂಪಿಯ 10 ತಂಡಗಳು ಸಜ್ಜಾಗಿ ನಿಂತಿವೆ.
ವಿವಿಧ ದರ್ಜೆಯ 90 ಹೋಟೆಲ್ ಗಳನ್ನು ನಗರದಲ್ಲಿ ಈಗಾಗಲೇ ಜಿಲ್ಲಾಡಳಿತದ ಅಧಿಕಾರಿಗಳು ಕಾಯ್ದಿರಿಸಿದ್ದು, ಅಲ್ಲಿ 4,700 ಜನರನ್ನು ಕ್ವಾರಂಟೈನ್ ನಲ್ಲಿ ಇರಲು ಅವಕಾಶವಿದೆ. ಬಿಎಂಟಿಸಿ ಬಸ್ ಗಳು ಪ್ರಯಾಣಿಕರನ್ನು ಹೋಟೆಲ್ ಗೆ ಕರೆದೊಯ್ಯಲು ಸಜ್ಜಾಗಿ ನಿಂತಿವೆ.
ಹೋಟೆಲ್ ಬಾಡಿಗೆ ಮತ್ತು ಆಹಾರದ ವೆಚ್ಚವನ್ನು ಕ್ವಾರಂಟೈನ್ ನಲ್ಲಿ ಇರುವವರೇ ಭರಿಸಬೇಕಾಗಿದ್ದು, ಯಾವ ದರ್ಜೆಯ ಹೋಟೆಲ್ ಬೇಕು ಎಂಬುದನ್ನು ಪ್ರಯಾಣಿಕರಿಗೆ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ಹೋಟೆಲ್ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದವರನ್ನು ಸರ್ಕಾರಿ ಹಾಸ್ಟೆಲ್, ಸಮುದಾಯಭವನಗಳಲ್ಲಿ ಇರಿಸಲಾಗುವುದು. ಅವರಿಗೆ ಆಹಾರದ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ
ತುಮಕೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಅತಿ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಗಂಭೀರ ಆರೋಪದ...








