Delhi : ತನ್ನ ಕತ್ತು ತಾನೇ ಸೀಳಿಕೊಂಡ ವ್ಯಕ್ತಿ ; ಹಿಡಿಯಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿದ…
ವ್ಯಕ್ತಿಯೊಬ್ಬ ತನ್ನ ಕತ್ತನ್ನ ತಾನೇ ಸೀಳಿಕೊಂಡು ಸಾರ್ವಜನಿಕವಾಗಿ ಓಡಾಡಿರುವ ಘಟನೆ ದೆಹಲಿ ಯಲ್ಲಿ ನಡೆದಿದೆ. ವ್ಯಕ್ತಿಯನ್ನ ಕ್ರಿಶನ್ ಶೇರ್ವಾಲ್ ಎಂದು ಗುರುತಿಸಲಾಗಿದೆ.
ಮಾರ್ಚ್ 16 ರಂದು ಸಂಜೆ 6.40 ರ ಸುಮಾರಿಗೆ ಎಂಎಸ್ ಪಾರ್ಕ್ ಬಳಿ ಈ ಘಟನೆ ನಡೆದಿದ್ದು ಸ್ಥಳಿಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಾಥು ಕಾಲೋನಿ ಚೌಕ್‌ನಲ್ಲಿ ಪೊಲೀಸರು ಮತ್ತು ಸ್ಥಳಿಯರು ಆತನನ್ನ ಹಿಡಿಯಲು ಮುಂದಾದಾಗ ಪೊಲೀಸ್ ಅಧಿಕಾರಿಗಳನ್ನ ಗಾಯಗೊಳಿಸಿದ್ದಾನೆ ಅಲ್ಲದೇ ಅವರ ಪಿಸ್ತೂಲ್ ಕಸಿದುಕೊಂಡು ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಈ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ನಂತರ ಪೊಲೀಸರು ಅವನನ್ನ ಹಿಡಿದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಸದ್ಯ ಕ್ರಿಶನ್ ಶೇರ್ವಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ ಎಂಎಸ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಐಪಿಸಿ ಸೆಕ್ಷನ್ 307/394/397/186/353 ಮತ್ತು 27 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ರಿಶನ್ ಶೇರ್ವಾಲ್ ತಮ್ಮ ಪತ್ನಿಯಿಂದ ಬೇರ್ಪಟ್ಟು ಹಲವು ರೀತಿಯ ಖಿನ್ನತೆಗಳಿಗೆ ಒಳಾಗಿದ್ದ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Delhi: Man slits his own throat; Shots were fired at the policemen who came to catch…