ರುಚಿಯಾದ ಮೈಸೂರು ಬೋಂಡಾ
ಬೇಕಾಗುವ ಸಾಮಗ್ರಿಗಳು
1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
1/4 ಕಪ್ ಅಕ್ಕಿ ಹಿಟ್ಟು (ಬೋಂಡಾವನ್ನು ಗರಿಗರಿಯಾಗಿಸಲು)
1/2 ಚಮಚ ಅಡುಗೆ ಸೋಡಾ
1/2 ಚಮಚ ಜೀರಿಗೆ
2-3 ಹಸಿ ಮೆಣಸು (ಚಿಕ್ಕದಾಗಿ ಹೆಚ್ಚಿದ್ದು)
1 ಚಮಚ ತುರಿದ ಶುಂಠಿ
2 ಚಮಚ ತೆಂಗಿನ ತುರಿ ಅಥವಾ ಚಿಕ್ಕದಾಗಿ ಕತ್ತರಿಸಿದ ತೆಂಗಿನ ಹೋಳು
2 ಚಮಚ ಮೊಸರು
1 ಈರುಳ್ಳಿ,
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಕಲೆಸಲು ತಕ್ಕಷ್ಟು ನೀರು
ಬೋಂಡಾ ಹುರಿಯಲು ಎಣ್ಣೆ
ಮಾಡುವ ವಿಧಾನ
1. ಮೊದಲಿಗೆ ಒಂದು ದೊಡ್ಡ ಬೌಲ್ ನಲ್ಲಿ, ಮೈದಾ ಅಥವಾ ಗೋಧಿ ಹಿಟ್ಟು ಹಾಕಿ.
ಈಗ 1/4 ಕಪ್ ಅಕ್ಕಿ ಹಿಟ್ಟು, 1/2 ಚಮಚ ಅಡುಗೆ ಸೋಡಾ, ಮತ್ತು ಉಪ್ಪು ಸೇರಿಸಿ.
ಚೆನ್ನಾಗಿ ಕಲೆಸಿ.
2. ಕತ್ತರಿಸಿದ ಹಸಿ ಮೆಣಸು, ಜೀರಿಗೆ, ತುರಿದ ಶುಂಠಿ ಸೇರಿಸಿ.
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.. 2 ಚಮಚ ಮೊಸರು ಹಾಕಿ, ಮೃದುವಾದ ಹದ ಬರುವಂತೆ ನೀರು ಸೇರಿಸಿ ಮಿಕ್ಸ್ ಮಾಡಿ.
3. ಕಡಾಯಿಗೆ ಒಂದು ಕಪ್ ಎಣ್ಣೆ ಹಾಕಿ ಕಾದ ನಂತರ, ಒಂದು ಚಮಚ ಹಿಟ್ಟು ತೆಗೆದು ಎಣ್ಣೆಗೆ ಹಾಕಿ ನೋಡಿ.
ಹಿಟ್ಟು ಮೇಲಕ್ಕೆ ತಕ್ಷಣ ಎದ್ದರೆ, ಎಣ್ಣೆ ಸರಿಯಾಗಿ ಬಿಸಿಯಾಗಿದೆ ಎಂದರ್ಥ.
4. ಈಗ ಬೋಂಡಾ ಆಕಾರದಲ್ಲಿ ಹಿಟ್ಟನ್ನು ಎಣ್ಣೆಗೆ ಬಿಡಿ.
ಮಧ್ಯಮ ಉರಿಯಲ್ಲಿ ಬೋಂಡಾಗಳನ್ನು ಹುರಿದುಕೊಳ್ಳಿ. ಬೋಂಡಾಗಳು ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಇವುಗಳನ್ನು ಹೊರತೆಗೆಯಿರಿ.
5. ಸರ್ವಿಂಗ್ ಟಿಪ್ಸ್:
ಬೋಂಡಾಗಳನ್ನು ಕೊಬ್ಬರಿ ಚಟ್ನಿ ಅಥವಾ ಟೊಮಾಟೊ ಸಾಸ್ ಜೊತೆ ಸರ್ವ್ ಮಾಡಿ.
ಗರಿಗರಿಯಾದ ಬೋಂಡಾ ತಿನ್ನಲು ಚಳಿ ಸಮಯದ ಸವಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ!