ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಹಾವಳಿ – 40 ಪ್ರಕರಣ ದೃಢ
ದೇಶದಲ್ಲಿ ಕೊರೊನಾ 2ನೇ ಅಲೆ ಇನ್ನೇನು ಕಡಿಮೆಯಾಗ್ತಿದೆ ಅಂತ ನಿರಾಳವಾಗ್ತಿರುವ ಹೊತ್ತಲ್ಲೇ ಬ್ಲಾಕ್ ಫಂಗಸ್ ಜೊತೆಗೆ ಇದೀಗ ಕೋವಿಡ್ ಮತತ್ತೊಂದು ರೂಪಾಂತರ ತಳಿ ಡೆಲ್ಟಾ ಪ್ಲಸ್ ಆತಂಕ ಸೃಷ್ಟಿಸಿದೆ. ಇನ್ನೂ ಈ ತಳಿ ಈಗಾಗಲೇ ಭಾರತ, ಚೀನಾ, ಅಮೆರಿಕ, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್,ಪೋರ್ಚುಗಲ್, ಜಪಾನ್, ಪೋಲೆಂಡ್, ರಷ್ಯಾದಲ್ಲಿ ಪತ್ತೆಯಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಈ ಸೋಂಕಿನ 40 ಪ್ರಕರಣಗಳು ಪತ್ತೆಯಾಗಿವೆ. ಒಂದು ಮೂಲದ ಪ್ರಕಾರ ಕರ್ನಾಟಕದಲ್ಲಿ 2,ಮಧ್ಯಪ್ರದೇಶದಲ್ಲಿ 6, ಮಹಾರಾಷ್ಟ್ರದಲ್ಲಿ 21, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3, ಪಂಜಾಬ್, ಆಂಧ್ರಪ್ರದೇಶದಲ್ಲಿ 1, ಜಮ್ಮು– ಕಾಶ್ಮೀರದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಇನ್ನೊಂದೆಡೆ ಕೊರೊನಾ 3ನೇ ಅಲೆಯೂ ಆಗಸ್ಟ್ ವೇಳೆಗೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೊರೋನಾ ರೂಪಾಂತರ ಭೀತಿ – ರಷ್ಯಾದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಮರು ಲಸಿಕೆ ನೀಡಲು ನಿರ್ಧಾರ
ನಿಯಮಗಳ ಪಾಲನೆ ವಿಚಾರವಾಗಿ ಗೂಗಲ್ ಕಾರ್ಯವೈಖರಿಯ ತನಿಖೆಗೆ ಮುಂದಾದ ಐರೋಪ್ಯ ಒಕ್ಕೂಟ..!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








