ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗೆ ಮುಗಿಬಿದ್ದಿವೆ ವಿಶ್ವದ 92 ರಾಷ್ಟ್ರಗಳು..!
ನವದೆಹಲಿ: ಲಸಿಕೆ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ಭಾರತದಿಂದಲೇ ಔಷಧಿ ಖರೀದಿಸಲು ಅನೇಕ ರಾಷ್ಟ್ರಗಳು ಮುಗಿಬಿದ್ದಿವೆ.
ಹೌದು ಚೀನಾದಿಂದ ಇಡೀ ವಿಶ್ವಕ್ಕೆ ಪಸರಿಸಿರುವ ಕೊರೊನಾ ಹಾವಳಿಗೆ ಬ್ರೇಕ್ ಹಾಕಲು ಒಂದು ವರ್ಷದಿಂದ ವಿಶ್ವದ ವೈದ್ಯರ ತಂಡ ಲಸಿಕೆ ಕಂಡುಹಡಿಯೋದ್ರಲ್ಲೇ ತೊಡಗಿದ್ದರು. ಇದೀಗ ಲಸಿಕೆ ಸಿಕ್ಕಿದೆ. ಚೀನಾ, ಭಾರತ ಸೇರಿ ಅನೇಕ ರಾಷ್ಟ್ರಗಳು ಲಸಿಕೆ ಕಂಡುಹಿಡಿದಿವೆ. ಆದ್ರೆ ಅನೇಕ ರಾಷ್ಟ್ರಗಳು ನರಿ ಚೀನಾವನ್ನ ನಂಬುತ್ತಿಲ್ಲ.. ಚೀನಾದ ಯಾವ ವಸ್ತುಗಳು ನಂಬಲಾರ್ಹವೂ ಅಲ್ಲ… ಅಲ್ಲಿನ ಮನುಷ್ಯರಿಂದ ಹಿಡಿದು ತಿನ್ನುವ ಪ್ರತಿ ಆಹಾರ ಪದಾರ್ಥವನ್ನೂ ಸಹ ಡ್ಯೂಪ್ಲಿಕೆಟ್ ಮಾಡೋ ಅಂತ ದೇಶ ಅದು.. ಚೀನಾವನ್ನ ನಂಬಲು ತಯಾರಿಲ್ಲದ ರಾಷ್ಟ್ರಗಳು ಲಸಿಕೆಗಾಗಿ ಬಾರತದ ಬೆನ್ನು ಬಿದ್ದಿದೆ.
ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ಕೆಟ್ಟ ಅಧ್ಯಕ್ಷ
ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಮೇಡ್ ಇನ್ ಇಂಡಿಯಾ ಅತಿ ಹೆಚ್ಚಾಗಿ ಪರಿಣಾಮ ಬೀರಿದೆ. ಅನೇಕ ವಸ್ತುಗಳು , ಡಿಜಿಟಲ್ ಮಾರುಕಟ್ಟೆಗಳಲ್ಲೂ ಭಾರತದ ಮೇಡ್ ಇನ್ ಇಂಡಿಯಾ ಕಾನ್ಸೆಪ್ಟ್ ಅಗಾಧವಾದ ಪರಿಣಾ ಬೀರಿದೆ. ಇಂದು ಭಾರತೀಯ ಕಂಪೆನಿಗಳು ಜಗತ್ತಿಗೆ ಔಷಧಿ ಪೂರೈಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ದೇಶಿ ನಿರ್ಮಿತ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಂದ ಭಾರತದ ಮೇಲಿನ ನಂಬಿಕೆ ಮತ್ತಷ್ಟು ದುಪ್ಪಟ್ಟಾಗಿದ್ದು, ಈವರೆಗೂ ಸರಿಸುಮಾರು 92 ರಾಷ್ಟ್ರಗಳು ಭಾರತದಿಂದ ಔಷಧಿ ಖರೀದಿಸಲು ಮುಂದಾಗಿವೆ.
ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿ ನನಗೆ ನೋವುಂಟು ಮಾಡಬೇಡಿ : ರಜನೀಕಾಂತ್..!
ಆದರೆ, ಭಾರತ ನೆರೆ ಹೊರೆಯ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಬಾಂಗ್ಲಾದೇಶ, ಬೂತಾನ್, ಶ್ರೀಲಂಕಾ, ನೇಪಾಳ, ಆಫ್ಘಾನಿಸ್ತಾನ ರಾಷ್ಟ್ರಗಳಿಗೆ ಮೊದಲ ಹಂತದಲ್ಲಿ ಲಸಿಕೆಗಳನ್ನು ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನೂ ನೇಪಾಳ 12 ಮಿಲಿಯನ್ ಡೋಸೆಜ್ಗಳಿಗೆ , ಬಾಂಗ್ಲಾದೇಶ 30ಮಿಲಿಯನ್, ಬೂತಾನ್ ಒಂದು ಮಿಲಿಯನ್ ಡೋಸೆಜ್ಗಳಿಗೆ ಆದೇಶ ನೀಡಿದೆ. ಮ್ಯಾನ್ಮಾರ್, ಶ್ರೀಲಂಕಾ, ಮಾಲ್ಡೀವ್ಸ್ , ಆಫ್ಘಾನಿಸ್ತಾನ ದೇಶಗಳು ಭಾರತದಿಂದ ಲಸಿಕೆ ಖರೀದಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿದೆ.
ಇನ್ನು ದೂರದ ಬ್ರೆಜಿಲ್ ಎರಡು ಮಿಲಿಯನ್ ಡೋಸೆಜ್ಗೆ, ದಕ್ಷಿಣ ಆಫ್ರಿಕಾ 1.1 ಮಿಲಿಯನ್, ಜಪಾನ್ 120 ಮಿಲಿಯನ್, ದಕ್ಷಿಣ ಕೊರಿಯಾ 10 , ಆಸ್ಟ್ರೇಲಿಯಾ 53.8 , ಫಿಲಿಪೈನ್ಸ್ 2.6 ಮಿಲಿಯನ್, ಇಂಡೋನೇಷಿಯಾ 100 , ಥೈಲ್ಯಾಂಡ್ 26 ಮಿಲಿಯನ್ ಲಸಿಕೆ ಖರೀದಿಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ವಿಶ್ವದಲ್ಲೇ ಮೊದಲ ಬಾರಿಗೆ ಬಳಕೆಗೆ ಬಂದ ಫೈಜರ್ ಲಸಿಕೆಗಿಂತಲೂ ಭಾರತೀಯ ಮೂಲದ ಕೋವಿಶೀಲ್ಡ್ ವ್ಯಾಪಕ ಬೇಡಿಕೆ ಗಿಟ್ಟಿಸಿಕೊಂಡಿದೆ.
ಕೆಜಿಎಫ್ 2 ಟೀಸರ್ ನಲ್ಲಿ ಪವರ್ ಫುಲ್ ನಲ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು…? ಪಾತ್ರ ಯಾವುದು…?
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel