ದೆಹಲಿಯಲ್ಲಿ ಡೆಂಗಿ ಆತಂಕ : ಪ್ರಕರಣಗಳ ಸಂಖ್ಯೆ 1,530ಕ್ಕೆ ಏರಿಕೆ , 6 ಸಾವು
ದೆಹಲಿ : ಒಂದೆಡೆ ದೇಶದಲ್ಲಿ ಮಾಹಮಾರಿ ಕೊರೊನಾ ಪ್ರಕರಣಗಳ ಏರಿಳಿತದ ನಡುವೆ ಡೆಂಗಿ ಆತಂಕವೂ ಹೆಚ್ಚಾಗಿದೆ. ಗಿಯಿಂದ ಈ ವರ್ಷ ಇನ್ನೂ 5 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 6 ಕ್ಕೇರಿದೆ.
ಡೆಂಗಿ ಪ್ರಕರಣಗಳ ಸಂಖ್ಯೆ 1,530 ಕ್ಕೆ ಏರಿಕೆಯಾಗಿದೆ. ಇದು 2017 ರಿಂದ ದೆಹಲಿಯಲ್ಲಿ ಡೆಂಗಿಯಿಂದ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ ಎಂದು ಅಧಿಕೃತ ವರದಿಗಳಿಂದ ತಿಳಿದುಬಂದಿದೆ. ಅಕ್ಟೋಬರ್ 30 ವರೆಗೆ ದೆಹಲಿಯಲ್ಲಿ ಈ ವರ್ಷ 1,196 ಡೆಂಗಿ ಪ್ರಕರಣಗಳು ದಾಖಲಾಗಿವೆ.
ಅಕ್ಟೋಬರ್ 30 ರವರೆಗೆ ಡೆಂಗಿಯಿಂದ 6 ಸಾವುಗಳು ಮತ್ತು 1,537 ಪ್ರಕರಣಗಳು ದಾಖಲಾಗಿವೆ. ಇದು 2018 ಕ್ಕಿಂತ ಹೆಚ್ಚಿನದಾಗಿದೆ ಎಂದು ಸೋಮವಾರ ಬಿಡುಗಡೆಯಾದ ಸಾಂಕ್ರಾಮಿಕ ರೋಗಗಳ ಕುರಿತ ವರದಿಯಿಂದ ತಿಳಿದುಬಂದಿದೆ.