ವೀರಮರಣವನ್ನಪ್ಪಿದ ಭಾರತೀಯ ಸೈನಿಕರ ವಿವರಗಳು
ಲಡಾಖ್, ಜೂನ್ 18: ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಚೀನಾ ಮತ್ತು ಭಾರತದ ಸೈನಿಕರ ಘರ್ಷಣೆಯಲ್ಲಿ ಓರ್ವ ಅಧಿಕಾರಿ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಚೀನಾದೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ಒಟ್ಟು 20 ಭಾರತೀಯ ಹುತಾತ್ಮ ಸೈನಿಕರ ಹೆಸರನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
1 ಸಂತೋಷ್ ಬಾಬು – ಹೈದರಾಬಾದ್ (ತೆಲಂಗಾಣ)
2 ನುಡುರಾಮ್ ಸೊರೆನ್ – ಮಯೂರ್ಭಂಜ್ (ಒಡಿಶಾ)
3 ಮಂದಿಪ್ ಸಿಂಗ್ – ಪಟಿಯಾಲ (ಪಂಜಾಬ್)
4 ಸತ್ನಮ್ ಸಿಂಗ್ – ಗುರುದಾಸ್‌ಪುರ (ಪಂಜಾಬ್)
5 ಕೆ ಪಳನಿ – ಮದುರೈ (ತಮಿಳುನಾಡು)
6 ಸುನೀಲ್ ಕುಮಾರ್ – ಪಾಟ್ನಾ (ಬಿಹಾರ್)
7 ಬಿಪುಲ್ ರಾಯ್ – ಮೀರತ್ (ಉತ್ತರ ಪ್ರದೇಶ)
8 ದೀಪಕ್ ಕುಮಾರ್ – ರೇವಾ (ಮಧ್ಯಪ್ರದೇಶ)
9 ರಾಜೇಶ್ ಒರಾಂಗ್ – ಬಿರ್ಭಮ್ (ಪಶ್ಚಿಮ ಬಂಗಾಳ)
10 ಕುಂದನ್ ಕುಮಾರ್ ಓಜಾ – ಸಾಹಿಬ್‌ಗಂಜ್ (ಝಾರ್ಖಂಡ್)
11 ಗಣೇಶ್ ರಾಮ್ – ಕಂಕೇನ್ (ಚತ್ತೀಸ್‌ಗಢ್)
12 ಚಂದ್ರಕಾಂತ್ ಪ್ರಧಾನ್ – ಕಂಧಮಾಲ್ (ಒಡಿಶಾ)
13 ಅಂಕುಶ್ ಠಾಕೂರ್ – ಹಮೀರ್‌ಪುರ (ಹಿಮಾಚಲ ಪ್ರದೇಶ)
14 ಗುರ್ಬಿಂದರ್ – ಸಾಂಗ್ರೂರ್ (ಪಂಜಾಬ್)
15 ಗುರ್ತೇಜ್ ಸಿಂಗ್ – ಮಾನ್ಸಾ (ಪಂಜಾಬ್)
16 ಚಂದನ್ ಕುಮಾರ್ – ಭೋಜ್‌ಪುರ್ (ಬಿಹಾರ್)
17 ಕುಂದನ್ ಕುಮಾರ್ – ಸರ್ಹಾಸ (ಬಿಹಾರ್)
18 ಅಮನ್ ಕುಮಾರ್ – ಸಮಸ್ತಿಪುರ (ಬಿಹಾರ್)
19 ಜೈ ಕಿಶೋರ್ ಸಿಂಗ್ – ವೈಶಾಲಿ (ಬಿಹಾರ್)
20 ಗಣೇಶ್ ಹನ್ಸ್ಡಾ – ಪೂರ್ವ ಸಿಂಗ್ಭೂಮ್ (ಝಾರ್ಖಂಡ್)
ಭಾರತ ಘರ್ಷಣೆಯಲ್ಲಿ ಮೃತಪಟ್ಟ ಸೈನಿಕರ ಮಾಹಿತಿ ನೀಡಿದ್ದರೆ, ಚೀನಾ ಮಾತ್ರ ಇದುವರೆಗೆ ತಮ್ಮ ಸೈನ್ಯದಲ್ಲಿ ಉಂಟಾದ ಪ್ರಾಣ ಹಾನಿ ಬಗ್ಗೆ ಮಾಹಿತಿ ನೀಡಿಲ್ಲ. ಭಾರತಕ್ಕೆ ದೊರಕಿರುವ ಮಾಹಿತಿಯ ಪ್ರಕಾರ ಸುಮಾರು 40ಕ್ಕೂ ಅಧಿಕ ಚೀನಾ ಸೈನಿಕರು ಮೃತಪಟ್ಟಿದ್ದರೆ, ಯುಎಸ್ ಗುಪ್ತಚರ ವರದಿಗಳ ಪ್ರಕಾರ 35 ಚೀನಾ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.