UKಯಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರ BA.2 ಪತ್ತೆ
ಯು.ಕೆ: ಕೊರೊನಾ ರೂಪಾಂತರ ಡೆಲ್ಟಾ, ಓಮಿಕ್ರಾನ ಪತ್ತೆಯಗಿ ಜನರಲ್ಲಿ ಭಯ ಹುಟ್ಟಿಸಿತ್ತು, ಈಗ ಮತ್ತೇ ಓಮಿಕ್ರಾನ ರೂಪಾತಂತರ BA.2 ಪತ್ತೆಯಾಗಿದ್ದು ಆತಂತಕ ಹೆಚ್ಚಿಸಿದೆ. ಇದರ ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳಿವೆ ಎಂದು UKHSA ಎಚ್ಚರಿಸಿದೆ.
ಕಳೆದ 2 – 3 ವರ್ಷಗಳಿಂದ ಜಗತ್ತಿನಾದ್ಯಂತ ಕೊರೊನಾ ಹರಡುತ್ತಲೇ ಇದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅದೇ ರೀತಿ, ಕೆಲ ತಿಂಗಳುಗಳಿಂದ ಕೊರೊನಾದ ರೂಪಾಂತರ ಓಮಿಕ್ರಾನ್ ಜಗತ್ತಿನಾದ್ಯಂತ ಹರಡುತ್ತಿದೆ. ಕೊರೊನಾ ತಡೆಗಟ್ಟಲು ಲಸಿಕೆ ಹಾಕಿಸಿಕೊಂಡವರಿಗೂ ಈ ಸೋಂಕು ಹರಡುತ್ತದೆ, ಇದರ ವಿರುದ್ಧ ಯಾವ ಔಷಧಗಳನ್ನು ನೀಡಬೇಕೆಂದು ಇನ್ನೂ ವೈದ್ಯರು, ತಜ್ಞರು ಆತಂಕದಲ್ಲೇ ಇದ್ದಾರೆ. ಆದರೆ, ಈ ನಡುವೆ ಯುಕೆಯಿಂದ ಮತ್ತೊಂದು ಆತಂಕಕಾರಿ ಸುದ್ದಿ ಬಂದಿದೆ.
ಓಮಿಕ್ರಾನ್ ರೂಪಾಂತರವಾದ BA.2 ಅತೀ ವೇಗವಾಗಿ ಹರುಡಡುತ್ತದೆ ಮತ್ತು ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳನ್ನು ದೇಶವು ಪತ್ತೆಹಚ್ಚಿದೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಆಘಾತಕಾರಿ ಮಾಹಿತಿಯನ್ನು UK ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಪತ್ರಿಕೆ ಉಲ್ಲೇಖಿಸಿದೆ. ಆದರೆ, ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ವಯಸ್ಕರಿಗೆ ಕಡಿಮೆ ತೀವ್ರವಾಗಿದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ತಿಳಿಸಿದೆ.
Omicronನ ಹೊಸ ಉಪ-ವಂಶಾವಳಿ ಪತ್ತೆ:
Omicron, BA.2ನ ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳಿವೆ ಎಂದು UKHSA ಎಚ್ಚರಿಸಿದೆ. ಇದು ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಅನುವು ಮಾಡಿಕೊಡುವ ನಿರ್ದಿಷ್ಟ ರೂಪಾಂತರವನ್ನು ಹೊಂದಿಲ್ಲ ಎಂದೂ ಹೇಳಿದೆ. ಅಲ್ಲದೆ, ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತೇವೆ ಎಂದೂ UKHSA ತಿಳಿಸಿದೆ. ಈ ಮಧ್ಯೆ, ಕೇವಲ ಒಂದು ದಿನದ ಹಿಂದೆ, ಇಸ್ರೇಲ್‌ನ ಆರೋಗ್ಯ ಸಚಿವಾಲಯ (ಗುರುವಾರ) ಇಸ್ರೇಲ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಓಮಿಕ್ರಾನ್ ಸ್ಟ್ರೈನ್‌ನ ಉಪ-ರೂಪಾಂತರದ ಹಲವಾರು ಪ್ರಕರಣಗಳನ್ನು ಘೋಷಿಸಿತು. ಕಾನ್ ಪಬ್ಲಿಕ್ ಬ್ರಾಡ್‌ಕಾಸ್ಟರ್ ಪ್ರಕಾರ, ಇಸ್ರೇಲ್ ದೇಶದಲ್ಲಿ ಕನಿಷ್ಠ 20 ಅಂತಹ ಪ್ರಕರಣಗಳನ್ನು ಗುರುತಿಸಲಾಗಿದೆ.