ಮಡಿಕೇರಿ: ಬಾಳೆಗೊನೆ ಸಾಗಿಸುವ ನೆಪದಲ್ಲಿ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ಅರಣ್ಯ ಇಲಾಖೆ, ವಾಹನ ಸಹಿತ ಬೀಟೆ ಮರವನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ 2 ಲಕ್ಷ ರೂ. ಮೌಲ್ಯದ ಬೀಟೆ ಮರ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
ಹುಣುಸೂರಿನಿಂದ ಬೊಲೇರೊ ಪಿಕ್ ಅಪ್ ವಾಹನದಲ್ಲಿ ನೇಂದ್ರ ಬಾಳೆ ಗೊನೆಯನ್ನು ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾಕುಟ್ಟ ಅರಣ್ಯ ಚೆಕ್‍ಪೋಸ್ಟ್ ಬಳಿ ಬಂದ ವಾಹನವನ್ನು ಅರಣ್ಯ ಸಿಬ್ಬಂದಿಗಳು ತಪಾಸಣೆಗೆ ಒಳಪಡಿಸಿದರು.
ಈ ಸಂದರ್ಭ ಯಾರಿಗೂ ಸಂಶಯ ಬಾರದಂತೆ ಮೇಲಿನ ಭಾಗದಲ್ಲಿ ನೇಂದ್ರ ಬಾಳೆಹಣ್ಣಿನ ಗೊನೆಗಳನ್ನು ಜೋಡಿಸಿ ಕೆಳಭಾಗದಲ್ಲಿ ಬೀಟಿ ಮರದ 6 ದಿಮ್ಮಿಗಳಿಟ್ಟಿರುವುದು ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ವಾಹನ ಪರಿಶೀಲನೆ ನಡೆಸುತ್ತಿದ್ದಾಗ ಚಾಲಕ ಪರಾರಿಯಾಗಿದ್ದಾನೆ.
ಬೊಲೆರೋದಲ್ಲಿ ಸಿಕ್ಕ ಸ್ವತ್ತುಗಳ ಮೌಲ್ಯ ಅಂದಾಜು 2 ಲಕ್ಷ ರೂ.ಗಳಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯ ಇಲಾಖೆ ವಾಹನ ಮತ್ತು ಬೀಟೆ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel