ಮಡಿಕೇರಿ: ನೆರೆಯ ಕೇರಳ, ಶಿವಮೊಗ್ಗ, ಕೊಡಗು ಜಿಲ್ಲೆ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಚೋರನನ್ನು ಸೋಮವಾರ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅನುಮಾನದ ಮೇರೆಗೆ ಆನೇಕಲ್ ತಾಲ್ಲೂಕಿನ ಸುರೇಶ್ ಎಂಬಾತನನ್ನು ಪೋಲಿಸರು ಬಂಧಿದ್ದರು. ಅತನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ತಾನು ಕೇರಳ, ಮಡಿಕೇರಿ, ಶಿವಮೊಗ್ಗದಲ್ಲೂ ಕಳ್ಳತನ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ 70 ಸಾವಿರ ನಗದು, 285 ಗ್ರಾಂ ಚಿನ್ನಾಭರಣ ಕೃತ್ಯಕ್ಕೆ ಬಳಸುತ್ತಿದ ಐಷರಾಮಿ ಬೈಕ್ ಸೇರಿ 13.35 ಲಕ್ಷ ಮೌಲ್ಯದ ಸ್ವತನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಸುರೇಶ್, ಈ ಹಿಂದೆ ಶಿವಮೊಗ್ಗದ ಕಳವು ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಕಾರಣ ಖಚಿತ ಮಾಹಿತಿ ಮೇರೆಗೆ ಪೋಲಿಸರು ಕಾರ್ಯಚರಣೆ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








