ಬ್ರೆಜಿಲ್ ನಲ್ಲಿ ಸ್ವಯಂಸೇವನೊಬ್ಬ ಮೃತಪಟ್ಟರೂ ಅಸ್ಟ್ರಾಜೆನೆಕಾ ಪ್ರಯೋಗ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ – ಇದಕ್ಕೆ ಕಾರಣವೇನು ? developing Covid19 vaccine
ಬ್ರೆಜಿಲ್, ಅಕ್ಟೋಬರ್23: ಸೆಪ್ಟೆಂಬರ್ ಮೊದಲ ವಾರದಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಪ್ರಯೋಗ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. developing Covid19 vaccine
ಪ್ರಯೋಗದಲ್ಲಿ ಭಾಗವಹಿಸಿದ ಇಬ್ಬರು ಮೇಲೆ ಪ್ರತಿಕೂಲ ಪರಿಣಾಮ ಕಾಣಿಸಿಕೊಂಡ ಕಾರಣ ಪ್ರಯೋಗ ಸ್ಥಗಿತಗೊಂಡಿತ್ತು ಮತ್ತು ಇದನ್ನು ಅನುಸರಿಸಿ, ಇತರ ದೇಶಗಳಲ್ಲಿ ಕೂಡ ಪ್ರಯೋಗವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಯುಕೆ ಸರ್ಕಾರವು ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದ ನಂತರವಷ್ಟೇ ಪ್ರಯೋಗಗಳು ಪ್ರಾರಂಭವಾದವು. ಭಾರತ, ಬ್ರೆಜಿಲ್‌ನಲ್ಲೂ ಪ್ರಯೋಗಗಳು ಪ್ರಾರಂಭವಾದವು. ಆದರೂ, ಯುಎಸ್ ನಲ್ಲಿ ಇನ್ನೂ ಪ್ರಯೋಗಗಳನ್ನು ಪುನರಾರಂಭಿಸಿಲ್ಲ.
ಆದರೆ ಇದೀಗ ಸ್ವಯಂಸೇವನೊಬ್ಬ ಬ್ರೆಜಿಲ್ ನಲ್ಲಿ ಮೃತಪಟ್ಟರೂ, ಪ್ರಯೋಗವನ್ನು ನಿಲ್ಲಿಸಲಾಗಿಲ್ಲ. ಇದಕ್ಕೆ ಕಾರಣವೇನು?
ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
1. ಲಸಿಕೆ ಪ್ರಯೋಗದಲ್ಲಿ ಭಾಗವಹಿಸುವವರ ವಿವರಗಳು ಗೌಪ್ಯ ಮಾಹಿತಿಯಾಗಿದ್ದು, ಅನಾರೋಗ್ಯದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಮೃತಪಟ್ಟ ವ್ಯಕ್ತಿಯು 28 ವರ್ಷದ ವೈದ್ಯರಾಗಿದ್ದು, ಅವರು ಕೋವಿಡ್ -19 ರೋಗಿಗಳೊಂದಿಗೆ ಕೆಲಸ ಮಾಡಿದ್ದಾರೆ ಎಂದು ಬ್ರೆಜಿಲ್ ಪತ್ರಿಕೆಗಳು ವರದಿ ಮಾಡಿವೆ.
2. ವ್ಯಕ್ತಿಯು ಪ್ರಯೋಗದಲ್ಲಿ ಪಾಲ್ಗೊಳ್ಳುವವರಾಗಿ ದಾಖಲಾಗಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆದರೆ ಯಾವುದೇ ಲಸಿಕೆಯ ಶಾಟ್ ಅನ್ನು ಅವರಿಗೆ ನೀಡಲಾಗಿಲ್ಲ. ಆದ್ದರಿಂದ, ಪ್ರಯೋಗವನ್ನು ನಿಲ್ಲಿಸಲಾಗಿಲ್ಲ
3. ಎಲ್ಲಾ ಮಹತ್ವದ ವೈದ್ಯಕೀಯ ಘಟನೆಗಳನ್ನು ಪ್ರಾಯೋಗಿಕ ತನಿಖಾಧಿಕಾರಿಗಳು, ಸ್ವತಂತ್ರ ಸುರಕ್ಷತಾ ಮೇಲ್ವಿಚಾರಣಾ ಸಮಿತಿ ಮತ್ತು ನಿಯಂತ್ರಕ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ಣಯಿಸುತ್ತಾರೆ. ಈ ಮೌಲ್ಯಮಾಪನಗಳು ಪ್ರಯೋಗ ಮುಂದುವರಿಕೆ ಬಗ್ಗೆ ಯಾವುದೇ ಕಳವಳಕ್ಕೆ ಕಾರಣವಾಗಿಲ್ಲ ಎಂದು ಅಸ್ಟ್ರಾಜೆನೆಕಾ ಹೇಳಿದೆ.
4. ಆದರೆ ಅಂತಹ ಒಂದು ಸುದ್ದಿ ಜನರಲ್ಲಿ ಭಯಕ್ಕೆ ಕಾರಣವಾಗಿದೆ.
5. ಯುನೈಟೆಡ್ ಸ್ಟೇಟ್ಸ್ ನಲ್ಲಿ ಲಕ್ಷಾಂತರ ಲಸಿಕೆ ಶಾಟ್ ಗಳನ್ನು ಉತ್ಪಾದಿಸುತ್ತಿರುವ ಜಾನ್ಸನ್ ಮತ್ತು ಜಾನ್ಸನ್ ಭಾಗವಹಿಸುವವರು ಅನಿರೀಕ್ಷಿತ ಅನಾರೋಗ್ಯವನ್ನು ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಯೋಗವನ್ನು ನಿಲ್ಲಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ