ಮೈಸೂರು : ಇಂದು ಆಷಾಢ (Ashadha)ಮಾಸದ ಮೊದಲ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ (Chamundi Hills) ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ದಿನವಾಗಿರುವುದರಿಂದಾಗಿ ತಾಯಿಗೆ ವಿಶೇಷ ಪೂಜೆಗಳನ್ನು ಕೂಡ ದೇವಸ್ಥಾನದಲ್ಲಿ ಕೈಗೊಳ್ಳಲಾಗಿದೆ. ಬೆಳಗಿನ 3 ಗಂಟೆಯಿಂದಲೇ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ 5.30ಯಿಂದಲೇ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಆಷಾಢ ಮಾಸದ ಮೊದಲ ಶುಕ್ರವಾರದಂದು ತಾಯಿ ಭಕ್ತರಿಗೆ ಆಶೀರ್ವಾದ ಮಾಡಿ ಉದ್ಧರಿಸುತ್ತಾಳೆ ಎಂದು ಎಲ್ಲರೂ ನಂಬಿಕೆ ಇಟ್ಟಿದ್ದಾರೆ. ಇಂದು ದೇವಿಯ ದರ್ಶನ ಮಾಡಿದರೆ ಸಹಸ್ರ ಪುಣ್ಯ ದೊರೆಯಲಿದೆ ಎಂಬ ಮಾತಿದೆ. ಹೀಗಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಅಲ್ಲದೇ, ಆಷಾಢದ ಪ್ರತಿ ಶುಕ್ರವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಮಾಡುತ್ತಿರುತ್ತಾರೆ. ಪ್ರತಿ ಶುಕ್ರವಾರವೂ ವಿಶೇಷ ಪೂಜೆಗಳನ್ನು ಕೂಡ ನೆರವೇರಿಸಲಾಗುತ್ತಿರುತ್ತದೆ.
ರಾಜ್ಯದ ಬೇರೆ ಬೇರೆ ಮಾರ್ಗಗಳಿಂದ ಬರುವ ಭಕ್ತರಿಗಾಗಿ ಉಚಿತವಾಗಿ 50 ಕೆಎಸ್‌ಆರ್‌ಟಿಸಿ (KSRTC) ಬಸ್‍ಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಟ್ರಾಫಿಕ್ ಜಾಮ್ ಉಂಟಾಗದಂತೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ದರ್ಶನಕ್ಕೆ 50 ರೂ.ನಿಂದ 300 ರೂ.ವರೆಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.








