IPL 2022 – ಚಾಹಲ್ ಮತ್ತು ಜೋಸ್ ಬಟ್ಲರ್ ಗೆ ಡ್ಯಾನ್ಸ್ ಹೇಳಿಕೊಟ್ಟ ಧನಶ್ರೀ….
ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗುವ ಕನಸು ಕೊನೆಯ ಹಂತದಲ್ಲಿ ನುಚ್ಚುನೂರಾಯಿತು. ಆದರೆ ಈ ತಂಡದ ಇಬ್ಬರು ಸ್ಟಾರ್ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ.
ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಈ ಋತುವಿನ ಆರೆಂಜ್ ಕ್ಯಾಪ್ ಹೋಲ್ಡರ್. ಬಟ್ಲರ್ 17 ಪಂದ್ಯಗಳಲ್ಲಿ 863 ರನ್ ಗಳಿಸಿದ್ದಾರೆ. ಮತ್ತೊಬ್ಬ ಆಟಗಾರ ಯುಜ್ವೇಂದ್ರ ಚಹಾಲ್ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮಿಂಚಿದ್ದಾರೆ. ಚಹಲ್ 17 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಸುಮಾರು ಎರಡೂವರೆ ತಿಂಗಳು ಒಟ್ಟಿಗೆ ಸಮಯ ಕಳೆದ ಆಟಗಾರರು, ಫೈನಲ್ ಪಂದ್ಯದ ನಂತರ ಪರಸ್ಪರ ವಿದಾಯ ಹೇಳುವ ಸಮಯ ಬಂದಿದೆ. ಈ ಸಂದರ್ಭದಲ್ಲಿ, ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಧನಶ್ರೀ, ಬಟ್ಲರ್ ಮತ್ತು ಚಹಾಲ್ ಅವರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟಿದ್ದಾರೆ.
ಬಟ್ಲರ್ಗೆ ನನ್ನ ಗೌರವವನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡ ಧನಶ್ರೀ, “ಆರೆಂಜ್ ಮತ್ತು ಪರ್ಪಲ್ ನಡುವಿನ ಪಿಂಕ್ (ಧನಶ್ರೀ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಉಲ್ಲೇಖಿಸಿದ್ದಾರೆ) ಯುಜ್ವೇಂದ್ರ ಚಾಹಲ್ ಮತ್ತು ಜೋಸ್ ಬಟ್ಲರ್ ಬಗ್ಗೆ ನನಗೆ ಇರುವ ಗೌರವ ಮತ್ತು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಜೋಸ್. ನೀವು ಸಂಭಾವಿತ ವ್ಯಕ್ತಿ. ಮತ್ತು ತುಂಬಾ ಅದ್ಭುತವಾದ ವ್ಯಕ್ತಿ, ಹ್ಹಾ, ನಾವು ಹೊರಡುವ ಮೊದಲು ನಾವು ಒಬ್ಬರಿಗೊಬ್ಬರು ಹೇಳಿದ್ದು ನಿಜ, ನಾವು ಟ್ರೋಫಿಯನ್ನು ಗೆಲ್ಲಲಿಲ್ಲ, ಆದರೆ ನಾವು ಅನೇಕ ಹೃದಯಗಳನ್ನು ಗೆದ್ದಿದ್ದೇವೆ. ಕಳೆದ ರಾತ್ರಿಯ ಕೆಲವು ಉತ್ತಮ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ.” ಎಂದು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸೋಲಿನ ನಂತರ ಬೇಸರಗೊಂಡ ಬಟ್ಲರ್
ಜೋಸ್ ಬಟ್ಲರ್ ಪ್ರದರ್ಶನದ ಆಧಾರದ ಮೇಲೆ ರಾಜಸ್ಥಾನ್ ತಂಡ ಈ ವರ್ಷ ಇಡೀ ಋತುವಿನ ಪಂದ್ಯಗಳನ್ನ ಗೆದ್ದುಕೊಂಡಿತ್ತು. ಚಹಾಲ್ ಹೊರತುಪಡಿಸಿ, ಟ್ರೆಂಟ್ ಬೌಲ್ಟ್ ಮತ್ತು ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅಶ್ವಿನ್ ಕೂಡ ಸಾಕಷ್ಟು ಪ್ರಭಾವ ಬೀರಿದರು. ಆದರೆ ಬ್ಯಾಟಿಂಗ್ನಲ್ಲಿ ಬಟ್ಲರ್ ಹೊರತುಪಡಿಸಿ, ಯಾವುದೇ ಆಟಗಾರ ಸ್ಥಿರ ಪ್ರದರ್ಶನವನ್ನ ನೀಡಲು ಸಾಧ್ಯವಾಗಲಿಲ್ಲ. ಬಟ್ಲರ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಫೈನಲ್ನಲ್ಲೂ ತಂಡ ಅವರನ್ನೇ ನೆಚ್ಚಿಕೊಂಡಿತ್ತು. ಆರಂಭಿಕ ವಿಕೆಟ್ ಪತನದ ನಂತರ ಬಟ್ಲರ್ ಅವರ ಜವಾಬ್ದಾರಿ ಹೆಚ್ಚಿತು, ಆದರೆ ಬಟ್ಲರ್ ದೀರ್ಘ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅವರ ತಂಡದ ಸೋಲು ಮೊದಲ ಇನ್ನಿಂಗ್ಸ್ ನಂತರವೇ ನಿರ್ಧರವಾಗಿಬಿಟ್ಟಿತ್ತು.
ಇದರಿಂದ ಜೋಸ್ ಬಟ್ಲರ್ ಸ್ವಲ್ಪ ನಿರಾಶೆಗೊಂಡಿದ್ದಾರೆ. ಪಂದ್ಯದ ಬಳಿಕ ಗುಜರಾತ್ ತಂಡ ಚಾಂಪಿಯನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.