ವಿಚ್ಛೇದನದಿಂದ ಹಿಂದೆ ಸರಿದ ಧನುಷ್ ಐಶ್ವರ್ಯ – ದಾಂಪತ್ಯ ಮುಂದುವರಿಕೆ…
ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಮತ್ತು ಪತ್ನಿ ಐಶ್ವರ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 18 ವರ್ಷಗಳ ತಮ್ಮ ದಾಂಪತ್ಯವನ್ನ ಮುಂದುವರೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದೇ 9 ತಿಂಗಳ ಹಿಂದೆ ತಮಿಳಿನ ಸ್ಟಾರ್ ಜೋಡಿ ವಿಚ್ಛೇದನ ವಿಚಾರಕ್ಕೆ ಸುದ್ದಿಯಾಗಿದ್ದರು.ಸುಮಾರು 18 ವರ್ಷಗಳ ದಾಂಪತ್ಯ ಜೀವನ ಕಡಿದುಕೊಳ್ಳುವುದಾಗಿ ಧನುಷ್ ಮತ್ತು ಐಶ್ವರ್ಯಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.
ಇದು ಸಿನಿಮಾ ಮತ್ತು ಅಭಿಮಾನಿಗಳ ಬೇಸಕ್ಕೆ ಕಾರಣವಾಗಿತ್ತು. ಇದೀಗ ಒಂಬತ್ತು ತಿಂಗಳ ಬಳಿಕ ಈ ಜೋಡಿ ಮುನಿಸು ಮರೆತಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಮಿಳು ಸ್ಟಾರ್ ನಟ ಧನುಷ್ ಮತ್ತು ಐಶ್ವರ್ಯಾ ಜೋಡಿ ವಿಚ್ಛೇದನದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಧನುಷ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಇಬ್ಬರನ್ನು ಮತ್ತೆ ಒಂದು ಮಾಡಲು ರಜನಿಕಾಂತ್ ಮತ್ತು ಕುಟುಂಬದವರು ತುಂಬ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ಅವರ ಮನೆಯಲ್ಲಿ ಸಂದಾನ ಸಭೆ ಮಾಡಲಾಗಿದ್ದು ಅಲ್ಲಿ ಧನುಷ್ ದಂಪತಿ ತಮ್ಮ ಸಮಸ್ಯೆ ಬಗೆಹರಿಸಿಕೊಂಡು ಒಟ್ಟಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕಳಿಬರುತ್ತಿದೆ.
Dhanush And Aishwaryaa Rajinikanth Decide to Call Off Divorce After 9 Months