Dharwad- ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿ ಕೊಪ್ಪ ಗ್ರಾಮದಲ್ಲಿ ಅಚ್ಚರಿಕರ ಘಟನೆಯೊಂದು ನಡೆದಿದೆ ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆಯೊಂದು ಇಂದು ದೇವಾಲಯವಾಗಿ ಮಾರ್ಪಟ್ಟಿದೆ ಅರೆರೇ ಏನಿದು ಅಂತಿರಾ …?
ಹೌದೂ ಕಂಡೂಕೇಳರಿಯದಂತ ಘಟನೆಯೋಂದು ನಡೆದಿದೆ. ಇಲ್ಲಿ ನೊಡಿದರು ಜನ ಜಂಗುಳಿ ತುಂಬಿ ತುಳುಕುತ್ತಿದೆ. ಮನೆಯ ಮುಂದೆ ಸಾಲು ಸಾಲು ಮಂದಿ ನಿಂತಿ ದರ್ಷನ ಪಡೆಯುತ್ತಿದ್ದಾರೆ.
ಇದಕ್ಕೆ ಕಾರಣವೇನೆಂದರೆ ಏಕಾಏಕಿ ಉದ್ಭವವಾದ ಮೂರ್ತಿ. ಪವಾಡವೊಂದು ಸೃಷ್ಟಿಯಾಗಿದ್ದು ಮನೆ ಒಳಗೆ ಏಕಾಏಕಿ ದೇವರ ಮೂರ್ತಿ ಉದ್ಭವಿಸಿದೆ ಪವಾಡವೊಂದು ಸೃಷ್ಟಿಯಾಗಿದೆ
ಈ ಪವಾಡವು ಸುರಶೆಟ್ಟಿ ಕೊಪ್ಪ ಗ್ರಾಮದ ಬಸವರಾಜ್ ಕಲಭಾವಿ ಎಂಬುವವರ ಮನೆಯಲ್ಲಿ ಏಕಾಏಕಿ ದ್ಯಾಮಮ್ಮನ ಉದ್ಭವ ಮೂರ್ತಿಯೊಂದು ಸೃಷ್ಟಿಯಾಗಿದೆ.
ಕಲಭಾವಿ ಅವರ ಮನೆಯ ಕೋಣೆಯ ಮೂಲೆಯಲ್ಲಿ ಹದಿನೈದು ದಿನಗಳ ಹಿಂದೆ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ.ಈ ಮೂರ್ತಿಗೆ ಮನೆಯವರು ಅಲಂಕಾರ ಮಾಡಿ ಪೂಜೆ ಮಾಡ್ತಿದಾರೆ.
ಹೂವಿನ ಅಲಂಕಾರ ಮಾಡಿದ್ದು, ಗ್ರಾಮದ ಜನರು ಪವಾಡ ಕಂಡು ದರ್ಷನ ಪಡೇದು ಕೋಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಬಸವರಾಜ್ ಗೆ ಮೈಮೇಲೆ ದೇವಿ ಬರುತ್ತಿದ್ದರಂತೆ. ಹೀಗೆ ಮೈ ಮೇಲೆ ಬಂದಾಗ ನಾನು ನಿಮ್ಮ ಮನೆಯಲ್ಲಿ ಉದ್ಭವ ಮೂರ್ತಿಯಾಗ್ತೀನಿ ಎಂದು ದೇವಿ ಈ ಹೇಳಿದ್ಲಂತೆ.
ಮೊದಲೇ ದೇವಿ ನಾನು ಇಲ್ಲಿ ಉದ್ಭವ ಮೂರ್ತಿ ಯಾಗ್ತೀನಿ ಎಂದು ಬಸವರಾಜ್ ಗೆ ತಿಳಿಸಿದ್ದಳಂತೆ. ನಾನು ಹೇಳೋವರೆಗೂ ಕೋಠಡಿಯ ಬಾಗಿಲು ತೆರೆಯಬೇಡಿ ಎಂದು ದೇವಿ ನುಡಿದಿದ್ದಳಂತೆ .
ತದ ನಂತರ ದೇವಿಯ ಅಪ್ಪಣೆ ಮೇರೆಗೆ ಬಸವರಾಜ್ ಕೋಣೆ ಬಾಗಿಲನ್ನು ತೆಗೆದುದ್ದಾರೆ , ಇದಾದ ಬಳಿಕ ಆಗಿದ್ದೆಲ್ಲಾ ಪವಾಡವ. ಕೋಣೆಯಲ್ಲಿ ಮೂರ್ತಿ ಉದ್ಭವವಾಗಿದ್ದು ಬಸವರಾಜ್ ಅವರು ಇದನ್ನು ಕಂಡು ಲಡ್ಡು ಮುತ್ಯಾ ಅಜ್ಜರನ್ನ ಕರೆತಂದು ಪೂಜೆ ಮಾಡಿಸಿದ್ದಾರೆ.
ಗ್ರಾಮದ ಜನರು ಈ ಮನೆಯಲ್ಲಿ ಮೂರ್ತಿ ಉದ್ಭವವಾಗಿದ್ದು ದೇವಿ ಪವಾಡ ಎಂದು ಹೇಳುತ್ತಿದ್ದಾರೆ. ಲಡ್ಡು ಮುತ್ಯಾ ಸ್ವಾಮೀಜಿ ಬಂದು ಪೂಜೆ ಮಾಡಿದ ಬಳಿಕ, ಇದೀಗ ಗ್ರಾಮದ ಸುತ್ತ ಮುತ್ತಲಿನ ಜನ ಬಂದು ದೇವಿ ಪೂಜಿಸಿ ದರ್ಷನ ಪಡೆದು ಹೊಗುತ್ತಿದ್ದಾರೆ.
ಪವಾಡವೋ ಅಥವಾ ಕಲ್ಲಿಗೆ ಆ ರೀತಿ ಅಲಂಕಾರ ಮಾಡಿ ಅದೇ ಉದ್ಭವ ಮೂರ್ತಿ ಎಂದು ಜನರಿಗೆ ಮರಳು ಮಾಡಲಾಗಿದೆಯಾ ಅನ್ನೋ ಪ್ರಶ್ನೆಯೂ ಕಾಡ್ತಿದೆ.
ಯಾಕಂದ್ರೆ ದೇವಿ ಮೈಮೇಲೆ ಬಂದು ಉದ್ಭವ ವಾಗ್ತಿನಿ ಅಂತಾ ಹೇಳಿದ್ದು ಕೇಳಿದ್ರೆ ಅನುಮಾನಾಸ್ಪದವಾಗಿದೆ ಆದ್ರೆ ಗ್ರಾಮದ ಜನ ಮಾತ್ರ ಇದೊಂದು ಪವಾಡ ಎಂದು ಪೂಜೆ ಮಾಡ್ತಿದಾರೆ.
ಈ ವೇಳೆ ಮಹಿಳೆಯರು ಕುಂಬ ಹೊತ್ತು ದ್ಯಾಮಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ನಾವು ಮೊದಲು ನಂಬಲಿಲ್ಲ, ಆದ್ರೆ ಅಜ್ಜರನ್ನ ಕರೆಸಿ ನಾವು ಕೊಣೆಯ ಬಾಗಿಲು ತೆರೆದಿದ್ದೆವೆ.
ಇದನ್ನನು ಕಂಡ ಮಗೆ ಬಹಳ ಆಶ್ಚರ್ಯವಾಗಿದೆ ಅನ್ನೋದು ಸ್ಥಳೀಯರ ಮಾತಾಗಿದೆ . ದೇವಿ ಪವಾಡವೋ ಏನೋ ಮನೆಯಲ್ಲಿ ಏಕಾಏಕಿ ದೇವಿ ಉದ್ಭವ ಮೂರ್ತಿ ಸೃಷ್ಟಿಯಾಗಿದ್ದು, ಜನರು ಇದೀಗ ಬಸವರಾಜ್ ಕಲಭಾವಿ ಅವರ ಮನೆಯತ್ತ ಧಾವಿಸಿ ಬರುತ್ತಿದ್ದಾರೆ.
ಮನೆಯಲ್ಲಿ ಏಕಾಏಕಿ ದೇವಿ ಮೂರ್ತಿ ಉದ್ಭವವಾಗಿರೋದ ಹಲವು ಅನುಮಾನಕ್ಕೆ ಕಾರಣವಾಗಿದೆ. ಜನರನ್ನ ತನ್ನತ್ತ ಸೆಳೆಯಲು ಬಸವರಾಜ್ ಉದ್ಭವ ಮೂರ್ತಿ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ.








