Dharwad | ಪ್ರವಾಹದಲ್ಲಿ ಸಿಲುಕಿದ್ದ ಆರು ಜನರ ರಕ್ಷಣೆ
ಧಾರವಾಡ : ಜಿಲ್ಲಾಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಪ್ರವಾಹದಲ್ಲಿ ಸಿಲುಕಿರುವ ಆರು ಜನರನ್ನು ರಕ್ಷಣೆ ಮಾಡಲಾಗಿದೆ.
ಏಕಾಏಕಿ ಉಕ್ಕಿ ಹರಿದ ಹಳಿಯಾಳ- ಕಡಪಟ್ಟಿ ಗ್ರಾಮದ ಹಳ್ಳದಿಂದ ಪ್ರವಾಹ ಉಂಟಾಗಿ ಪ್ರವಾಹದಲ್ಲಿ ಆರು ಜನರು ಸಿಲುಕಿಕೊಂಡಿದ್ದರು.

ಸುದ್ಧಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಹುಬ್ಬಳ್ಳಿಯ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಆರು ಜನರ ರಕ್ಷಣೆ ಮಾಡಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಮಳೆರಾಯ ಸಾಕಷ್ಟು ಅವಘಡ ಸೃಷ್ಟಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಹಶಿಲ್ದಾರ ಪ್ರಕಾಶ್ ನಾಶಿ ಭೇಟಿ ನೀಡಿ ನೇತೃತ್ವ ವಹಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.